ಹರ್ಯಾಣದ ಮುಖ್ಯಮಂತ್ರಿ ನಿವಾಸದ ಹೊರಗೆ ರೈತರ ಪ್ರತಿಭಟನೆ,ಜಲಫಿರಂಗಿ ಪ್ರಯೋಗ

ಸಾಂದರ್ಭಿಕ ಚಿತ್ರ
ಚಂಡೀಗಡ: ಹರ್ಯಾಣದ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಅವರ ನಿವಾಸದ ಹೊರಗೆ ಶನಿವಾರ ಮುಂಜಾನೆ ಜಮಾಯಿಸಿದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಸಾವಿರಕ್ಕೂ ಹೆಚ್ಚು ರೈತರು ಘೋಷಣೆಗಳನ್ನು ಕೂಗುತ್ತಾ, ಧ್ವಜಗಳನ್ನು ಬೀಸಿದರು ಹಾಗೂ ರಾತ್ರಿಯಿಡೀ ಜಾಗರಣೆ ಮಾಡುವ ಉದ್ದೇಶವನ್ನು ಘೋಷಿಸಿದರು.
ರೈತರು ಹಳದಿ ಪೊಲೀಸ್ ಬ್ಯಾರಿಕೇಡ್ಗಳ ರಾಶಿಯ ಮೇಲೆ ನಿಂತು ಕೋಪದಿಂದ ಕೂಗುತ್ತಿರುವ ದೃಶ್ಯ ಕಂಡುಬಂದಿದ್ದು, ಬೆರಳೆಣಿಕೆಯಷ್ಟಿದ್ದ ಭದ್ರತಾ ಪಡೆಗಳು ಇದನ್ನೆಲ್ಲ ನೋಡುತ್ತಿದ್ದರು.
ಬ್ಯಾರಿಕೇಡ್ ಮುರಿದು ಮುನ್ನುಗ್ಗಿದ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು. ಕೃಷಿ ಕಾನೂನು ವಿರೋಧಿ ಪ್ರತಿಭಟನಾಕಾರರು ಈ ವಾರವೊಂದರಲ್ಲೇ ಹಲವು ಬಾರಿ ಘರ್ಷಣೆ ನಡೆಸಿದ್ದಾರೆ . ರಾಜ್ಯ ಸರಕಾರವು ಅಶ್ರುವಾಯು ವಾಹನಗಳೊಂದಿಗೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಧಾನ್ಯ ಮಾರುಕಟ್ಟೆಗಳಲ್ಲಿ ಹಾಗೂ ಹಲವಾರು ಜಿಲ್ಲೆಗಳಲ್ಲಿ ಆಡಳಿತಾರೂಢ ಬಿಜೆಪಿ-ಜನನಾಯಕ್ ಜನತಾ ಪಕ್ಷದ ಮೈತ್ರಿಯ ಶಾಸಕರ ನಿವಾಸಗಳ ಹೊರಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಭತ್ತದ ಸಂಗ್ರಹವನ್ನು ಪ್ರಾರಂಭಿಸಲು ಕೇಂದ್ರವನ್ನು ಒತ್ತಾಯಿಸಿ ಪಂಜಾಬಿನ ಜಿಲ್ಲಾ ಪ್ರಧಾನ ಕಚೇರಿಯನ್ನೂ ಒಳಗೊಂಡಂತೆ ಪ್ರತಿಭಟನೆಯ ಎಚ್ಚರಿಕೆಯನ್ನು ನಿನ್ನೆ ರೈತ ನಾಯಕ ರಾಕೇಶ್ ಟಿಕಾಯತ್ ನೀಡಿದರು.
#WATCH | Police use water cannon to disperse protesters who trespassed barricades ahead of Haryana Deputy CM Dushyant Chautala's programme, in Jhajjar. "At a time when farmers' crops have been damaged due to rains, Dy CM is coming here, instead of meeting them,"a protester says pic.twitter.com/NDHIuh0RRQ
— ANI (@ANI) October 1, 2021







