ಉಪ ಚುನಾವಣೆಗೆ ಮೊದಲು ಲೋಕ ಜನಶಕ್ತಿ ಪಕ್ಷದ ಹೆಸರು, ಚಿಹ್ನೆ ಸ್ತಂಭನಗೊಳಿಸಿದ ಚುನಾವಣಾ ಆಯೋಗ

photo: The Indian Express
ಹೊಸದಿಲ್ಲಿ: ಬಿಹಾರದ ರಾಜಕಾರಣಿ ಚಿರಾಗ್ ಪಾಸ್ವಾನ್ ಹಾಗೂ ಅವರ ಚಿಕ್ಕಪ್ಪ, ಕೇಂದ್ರ ಸಚಿವ ಪಶುಪತಿ ಪರಾಸ್ ನಡುವಿನ ವೈಷಮ್ಯದಿಂದಾಗಿ ಈ ತಿಂಗಳ ಕೊನೆಯಲ್ಲಿ ಬಿಹಾರದ ಎರಡು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮೊದಲು ಚುನಾವಣಾ ಆಯೋಗವು ಲೋಕ ಜನಶಕ್ತಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು (ಬಂಗಲೆ)ಸ್ತಂಭನಗೊಳಿಸಿದೆ.
ಈ ಕ್ರಮವು ಅಕ್ಟೋಬರ್ 30 ರಂದು ಕುಶೇಶ್ವರ ಆಸ್ಥಾನ್ ಹಾಗೂ ತಾರಾಪುರ ಕ್ಷೇತ್ರಗಳ ಉಪಚುನಾವಣೆಗೆ ಮುಂಚಿತವಾಗಿ ಬಂದಿದೆ. ಎರಡು ಕಡೆಯವರ ಸ್ಪರ್ಧಾತ್ಮಕ ಹಕ್ಕುಗಳಿಗೆ ಚುನಾವಣಾ ಆಯೋಗವು ಪ್ರತಿಕ್ರಿಯಿಸಿದೆ. ಯಾರಿಗೆ ಪಕ್ಷದ ಹೆಚ್ಚಿನ ಸದಸ್ಯರ ಬೆಂಬಲವಿದೆ ಎಂದು ನಿರ್ಧರಿಸುವ ತನಕ ಯಾವುದನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷ ಎಂದು ಗುರುತಿಸಲಾಗುವುದಿಲ್ಲ. ... ಆಯೋಗದ ನಿರ್ಧಾರವು ಅಂತಹ ಎಲ್ಲಾ ಪ್ರತಿಸ್ಪರ್ಧಿ ವಿಭಾಗಗಳ ಮೇಲೆ ಬದ್ಧವಾಗಿರುತ್ತದೆ ಎಂದಿದೆ.
ಪಾಸ್ವಾನ್ ಹಾಗೂ ಪರಾಸ್ ಅವರಿಗೆ ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಉಪಚುನಾವಣೆಗೆ ಪ್ರತ್ಯೇಕ ಹೆಸರು ಹಾಗೂ ಚಿಹ್ನೆಗಳನ್ನು ನೀಡುವಂತೆ ಸೂಚಿಸಲಾಗಿದೆ.
Next Story





