ಉಡುಪಿ: ಅ.3ರಂದು ರಕ್ತದಾನ ಶಿಬಿರ
ಉಡುಪಿ, ಅ.2: ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಆರೊಗ್ಯ ಆಯೋಗದ ನೇತೃತ್ವದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆ, ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೆನ್, ಐಸಿವೈಎಂ ಉದ್ಯಾವರ, ಅಭಯಹಸ್ತ ಹೆಲ್ಪ್ಲೈನ್ ಉಡುಪಿ, ಕಥೋಲಿಕ್ ಸಭಾ ಉದ್ಯಾವರ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ಗುಡ್ಡೆಯಂಗಡಿ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಅ.3ರಂದು ಬೆಳಿಗ್ಗೆ ಗಂಟೆ 8.30ರಿಂದ ಮಧ್ಯಾಹ್ನದವರೆಗೆ ಝೇವಿಯರ್ ಸಭಾಭವನದಲ್ಲಿ ಜರಗ ಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





