ಮಂಗಳೂರು: ಸಮುದ್ರಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಮಂಗಳೂರು, ಅ.2: ಕಡಲ ವಿಹಾರಕ್ಕೆಂದು ಪಣಂಬೂರು ಕಡಲ ತೀರಕ್ಕೆ ಬಂದಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸುವಲ್ಲಿ ಕಡಲ ಜೀವರಕ್ಷರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಮತ್ತಿಕೆರೆಯ ಪ್ರಸಾದ್ (20), ರಕ್ಷಿತ್ (20) ರಕ್ಷಣೆಗೊಳಗಾದವರು.
ವಾರಾಂತ್ಯದಲ್ಲಿ ಮಂಗಳೂರು ಪ್ರವಾಸಕ್ಕೆ ಬಂದಿದ್ದ ಯುವಕರು ಶನಿವಾರ ಸಂಜೆ ವೇಳೆಗೆ ಪಣಂಬೂರು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ಯುವಕರನ್ನು ಕಾರ್ಯಾಚರಣೆ ನಡೆಸಿ ಜೀವರಕ್ಷಕ ಪಡೆ ರಕ್ಷಣೆ ಮಾಡಿದೆ ಎಂದು ತಿಳಿದುಬಂದಿದೆ.
Next Story





