ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

ಮಂಗಳೂರು, ಅ.2:ಅಹಿಂಸಾ ಮಾರ್ಗದ ಮೂಲಕ ಜಾತ್ಯತೀತ ಸಿದ್ಧಾಂತದಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿ ನಮಗೆ ಆದರ್ಶ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯ ವಂಚಿತ, ತುಳಿತಕ್ಕೊಳಪಟ್ಟ ಜನರ ಬಗ್ಗೆ ಗಾಂಧಿ ಅವರಿಗೆ ನೋವಿತ್ತು. ಅವರನ್ನು ಮುನ್ನಲೆಗೆ ತರುವ ಬಯಕೆ ಅವರಿಗೆ ಇತ್ತು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವೇಷ ಭೂಷಣ ಹೇಗಿತ್ತು, ಈಗಿನ ಪ್ರಧಾನಿ ಅವರ ವೇಷ ಭೂಷಣ ಹೇಗಿದೆ ಎಂಬ ತುಲನೆ ಮಾಡಬೇಕಾದ ಅಗತ್ಯವಿದೆ. ದೇಶದ ಪರಿಕಲ್ಪನೆ ಇಲ್ಲದ ನರೇಂದ್ರ ಮೋದಿ ಮಾರ್ಕೆಟಿಂಗ್ ಪ್ರಧಾನಿ ಎಂದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಸಚಿವ ಜೆ.ಆರ್ ಲೋಬೊ, ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಪ್ರಕಾಶ್ ಸಾಲ್ಯಾನ್, ಲುಕ್ಮಾನ್ ಬಂಟ್ವಾಳ್, ಮಮತಾ ಗಟ್ಟಿ ವಿಶ್ವಾಸ್ ಕುಮಾರ್ ದಾಸ್, ಸವಾದ್ ಸುಳ್ಯ, ಮೋಹನ್ ಗೌಡ, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ, ಸುದರ್ಶನ್ ಜೈನ್, ಬಿ.ಎಂ.ಅಬ್ಬಾಸ್ ಅಲಿ, ಬಿ.ಕೆ.ಇದ್ದಿನಬ್ಬ ಕಲ್ಲಡ್ಕ, ಮಹಾಬಲ ಮಾರ್ಲ, ಮುಹಮ್ಮದ್ ಕುಂಜತ್ತಬೈಲ್, ಗಣೇಶ್ ಪೂಜಾರಿ, ಜಯಶೀಲ ಅಡ್ಯಂತಾಯ, ಎನ್.ಪಿ.ಮನುರಾಜ್, ಸಂತೋಷ್ ಶೆಟ್ಟಿ, ನೀರಜ್ ಚಂದ್ರ ಪಾಲ್, ಟಿ.ಕೆ.ಸುಧೀರ್, ನಝೀರ್ ಬಜಾಲ್, ಡಿ.ಕೆ. ಅಶೋಕ್, ಸಿ.ಎಂ.ಮುಸ್ತಫ, ರಮಾನಂದ ಪೂಜಾರಿ, ಆರೀಫ್ ಬಾವಾ, ಉದಯ್ ಕುಂದರ್, ಯೋಗೀಶ್ ಕುಮಾರ್, ಪ್ರಕಾಶ್ ಆಲ್ವಿನ್, ಸಂಶುದ್ದೀನ್ ಕುದ್ರೋಳಿ, ಚೇತನ್ ಬೆಂಗ್ರೆ, ರಾಕೇಶ್ ದೇವಾಡಿಗ, ಫಯಾಝ್ ಅಮ್ಮೆಮ್ಮಾರ್, ಸೌಹಾನ್ ಎಸ್.ಕೆ, ಆಶಿತ್ ಪಿರೇರಾ, ಯೋಗೀಶ್ ಕುಮಾರ್, ಶಾಂತಲಾ ಗಟ್ಟಿ, ಚಾಂದಿನಿ ಹರೀಶ್, ದೀಪಕ್ ಪೂಜಾರಿ, ಜಾರ್ಜ್, ನೆಲ್ಸನ್, ಬಿ.ಎಸ್. ಇಸ್ಮಾಯೀಲ್, ಚೇತನ್ ಕುಮಾರ್, ಭುವನ್ ಕರ್ಕೇರಾ ಉಪಸ್ಥಿತರಿದ್ದರು.







