ಗಾಂಧೀಜಿಗೆ ಅವಮಾನ; ಕಠಿಣ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್ಐಯಿಂದ ಕೊಣಾಜೆ ಠಾಣೆಗೆ ದೂರು
ಕೊಣಾಜೆ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯ ಜನ್ಮ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಗಾಂಧೀಜಿಯ ಅವಮಾನ ಮಾಡಿದಾತನ ವಿರುದ್ಧ ಡಿವೈಎಫ್ಐ ಕಾರ್ಯಕರ್ತರು ಕೊಣಾಜೆ ಠಾಣೆಗೆ ದೂರು ನೀಡಿ ಅರೋಪಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.
ವಾಟ್ಸಪ್ ನಲ್ಲಿ ಪ್ರಜ್ವಲ್ ಎಂಬಾತ ತನ್ನ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿ ಗಾಂಧೀಜಿ ಹೆಣ್ಣಿನೊಂದಿಗೆ ಕುಣಿಯುವ ಫೇಕ್ ಪೋಟೋಗಳನ್ನು ಹರಿಯಬಿಟ್ಟು ಅವಮಾನಿಸುವ ಕೃತ್ಯವನ್ನು ಎಸಗಿರುತ್ತಾನೆ. ಈತನ ಈ ಕೃತ್ಯದಿಂದ ಪ್ರದೇಶದಲ್ಲಿ ಶಾಂತಿ ಕದಡುವ ಪರಿಸ್ಥಿತಿ ಉಂಟಾಗಲಿದ್ದು ಇದು ಪರಸ್ಪರ ಸಂಘರ್ಷಕ್ಕೆ ಎಡೆಮಾಡಿಕೊಡುವ ಅವಕಾಶಗಳು ಬಹಳಷ್ಟು ಇದೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ ಐ ಹರೇಕಳ ಘಟಕವು ಒತ್ತಾಯಿಸಿದೆ.
ನಿಯೋಗದಲ್ಲಿ ಡಿವೈಎಫ್ ಐ ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಉಳ್ಳಾಲ ಮುಖಂಡರಾದ ಅಶ್ರಫ್ ಹರೇಕಳ, ಡಿವೈಎಫ್ ಐ ಹರೇಕಳ ಗ್ರಾಮದ ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಜೊತೆ ಕಾರ್ಯದರ್ಶಿ ರಶೀದ್, ಮುಖಂಡರಾದ ಬದ್ರುದ್ದೀನ್, ಇಸ್ಮಾಯಿಲ್ ಖಂಡಿಗ ಮುತಾಂದವರು ಉಪಸ್ಥಿತರಿದ್ದರು.





