ಕರ್ತವ್ಯದ ವೇಳೆ ಕುಸಿದು ಬಿದ್ದು ಮಹಿಳಾ ಪಿಡಿಒ ಮೃತ್ಯು

ಸಾವಿತ್ರಮ್ಮ
ಮೈಸೂರು,ಅ.2: ಕರ್ತವ್ಯದ ವೇಳೆ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ನಂಜನಗೂಡು ತಾಲೂಕು ಸುತ್ತೂರಿನ ಮಹಿಳಾ ಪಿಡಿಒ ಸಾವಿತ್ರಮ್ಮ (44) ಮೃತಪಟ್ಟಿದ್ದಾರೆ.
ಸೆ. 23ರಂದು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪಿಡಿಒ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ನಂಜನಗೂಡಿನ ಹುಲ್ಲಹಳ್ಳಿ ಮತ್ತು ಸುತ್ತೂರು ಗ್ರಾಮಗಳಲ್ಲಿ 6 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸಾವಿತ್ರಮ್ಮ ಕಾರ್ಯನಿರ್ವಹಿಸುತ್ತಿದ್ದರು.
Next Story





