ಕಾರಾಗೃಹಕ್ಕೆ ಬಂದಿದ್ದ ವ್ಯಕ್ತಿಯಿಂದ ಗಾಂಜಾ ಸೇವನೆ: ವಶಕ್ಕೆ
ಮಂಗಳೂರು, ಅ.2: ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗೆ ಬಟ್ಟೆ ತಂದಿದ್ದ ವ್ಯಕ್ತಿ ಮಾದಕ ದ್ರವ್ಯ ಗಾಂಜಾ ಸೇವಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಳೆಪುಣಿಯ ಅಬ್ದುಲ್ ಆಸಿಕ್ ಎಂಬಾತ ಶುಕ್ರವಾರ ಸಂಜೆ ವಿಚಾರಣಾಧೀನ ಕೈದಿಯೊಬ್ಬರಿಗೆ ಬಟ್ಟೆಗಳನ್ನು ನೀಡಲೆಂದು ಬಂದಿದ್ದ. ಅದನ್ನು ಜೈಲಿನ ಸಿಬ್ಬಂದಿ ಪರಿಶೀಲಿಸುವಾಗ ಆತ ಗಾಂಜಾ ಸೇವಿಸಿರುವ ಅನುಮಾನ ಬಂದಿತು. ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





