ಲಾರಿ ಢಿಕ್ಕಿ: ಲಕ್ಷಾಂತರ ರೂ. ನಷ್ಟ
ಕಾಪು, ಅ.2: ಕಟಪಾಡಿ ರಾ.ಹೆದ್ದಾರಿ 66ರ ಡಿವೈಡರ್‌ನಲ್ಲಿರುವ ಸೋಲಾರ್ ಕಂಬ, ಸಿಸಿ ಕ್ಯಾಮೆರಾಕ್ಕೆ ಲಾರಿಯೊಂದು ಅ.2ರಂದು ನಸುಕಿನ ವೇಳೆ ಢಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯು ಸೋಲಾರ್ ಕಂಬ, ಕ್ರ್ಯಾಷ್ ಬ್ಯಾರಿಯರ್ ಮತ್ತು ಪೊಲೀಸ್ ಇಲಾಖೆಯ ಸಿ.ಸಿ. ಕ್ಯಾಮರಕ್ಕೆ ಢಿಕ್ಕಿ ಹೊಡೆದು ಜಖಂಗೊಂಡಿದೆ. ಇದರಿಂದ ಒಟ್ಟು 1,50,000ರೂ. ನಷ್ಟ ಉಂಟಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story





