ಉಳ್ಳಾಲ : ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ, ಜಾಗೃತಿ ಕಾರ್ಯಕ್ರಮ

ಕೊಣಾಜೆ: ವಲಯ ಕಾಂಗ್ರೆಸ್ ಸಮಿತಿ ಹಾಗೂ ಕೊಣಾಜೆ ಕಾಂಗ್ರೆಸ್ ನ ವಿವಿಧ ಘಟಕಗಳ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಕೊಣಾಜೆ ಪದವು ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಅಬ್ದುರಹ್ಮಾನ್ ಕೋಡಿಜಾಲ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಅಚ್ಚುತ್ತಗಟ್ಟಿ ಕೊಣಾಜೆ, ಹಾಜಿ ಶೌಕತ್ ಆಲಿ, ಪಂಚಾಯತ್ ಸದಸ್ಯರಾದ ದೇವಣ್ಣಶೆಟ್ಟಿ, ಇಕ್ಬಾಲ್ ಕೊಣಾಜೆ, ರವಿ ಡಿಸೋಜ, ರುಖ್ಯ ಕೊಣಾಜೆ ಶೋಭಾ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಪದ್ಮಾವತಿ ಪೂಜಾರಿ , ಪಂಚಾಯತ್ ಮಾಜಿ ಸದಸ್ಯ ಹಾಜಿ ಹಸನ್ ಕುಂಞ ಕೋಡಿಜಾಲ್, ಮಂಗಳೂರು ವಿಧಾನಸಭಾ ವ್ಯಾಪ್ತಿಯ ಇಂಟೆಕ್ ಉಪಾಧ್ಯಕ್ಷರು ಹಾಗೂ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಕೆಎಂ ಅಬ್ದುರ್ರಹ್ಮಾನ್ ಕೋಡಿಜಾಲ್, ಕೊಣಾಜೆ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರೀಫ್ ಕೋಡಿಜಾಲ್, ಕಿಸಾನ್ ಘಟಕದ ದಯಾನಂದ ಗಟ್ಟಿ, ಸ್ಥಳೀಯ ಮುಖಂಡರಾದ ಅಬ್ದುಲ್ ಖಾದರ್ ಅಂದುಚ್ಚ ಕೋಡಿಜಾಲ್, ಕಬೀರ್ ಕಂಗುಹಿತ್ಲು, ಹಬೀಬ್ ಕೋಡಿಜಾಲ್, ನಝೀರ್ ಕೊಣಾಜೆ, ಹಾರಿಸ್ ,ಇರ್ಷಾದ್, ಶನೂನ್ ಹಾಗೂ ಇನ್ನಿತರ ಊರಿನ ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.




.jpeg)
.jpeg)

