ತ್ಯಾಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸ ವೆಬ್ ಪೋರ್ಟಲ್‌ಗೆ ಚಾಲನೆ
ಹೊಸದಿಲ್ಲಿ, ಅ.2: ಗಾಂಧಿ ಜಯಂತಿಯ ದಿನವಾದ ಶನಿವಾರ ಕೇಂದ್ರ ಸರಕಾರವು ಭಾರತದ ತ್ಯಾಜ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ತಂತ್ರಜ್ಞಾನ ಪೂರೈಕೆದಾರರು,ಸರಕಾರಿ ಪಾಲುದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಒಂದೆಡೆಗೆ ಸೇರಿಸಲು ‘ವೇಸ್ಟ್ ಟು ವೆಲ್ತ್ (ತ್ಯಾಜ್ಯದಿಂದ ಸಂಪತ್ತು)’ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿದೆ. ವೆಬ್ ಪೋರ್ಟಲ್ ಸುಸ್ಥಿರ ಅಭಿವೃದ್ಧಿಗಾಗಿ ಸಹಭಾಗಿತ್ವಗಳನ್ನು ಸಾಧ್ಯವಾಗಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ ರಾಘವನ್ ಅವರು ಟ್ವೀಟಿಸಿದ್ದಾರೆ.
ಪ್ರತ್ಯೇಕ ಟ್ವೀಟ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ದೇಶದ ತ್ಯಾಜ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಂಬಂಧಿಸಿದವರನ್ನು ಒಂದೇ ವೇದಿಕೆಯಲ್ಲಿ ತರುವುದು ವೆಬ್ ಪೋರ್ಟಲ್‌ನ ಉದ್ದೇಶವಾಗಿದೆ ಎಂದು ತಿಳಿಸಿದೆ.
Next Story





