Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಂಬೈ ಡ್ರಗ್ಸ್ ದಾಳಿ: ಶಾರೂಖ್ ಖಾನ್...

ಮುಂಬೈ ಡ್ರಗ್ಸ್ ದಾಳಿ: ಶಾರೂಖ್ ಖಾನ್ ಪುತ್ರ ಸಹಿತ 8 ಜನರನ್ನು ಬಂಧಿಸಿದ ಎನ್ ಸಿಬಿ

ವಾರ್ತಾಭಾರತಿವಾರ್ತಾಭಾರತಿ3 Oct 2021 12:17 PM IST
share
ಮುಂಬೈ ಡ್ರಗ್ಸ್ ದಾಳಿ: ಶಾರೂಖ್ ಖಾನ್ ಪುತ್ರ ಸಹಿತ 8 ಜನರನ್ನು ಬಂಧಿಸಿದ ಎನ್ ಸಿಬಿ

ಮುಂಬೈ/ಹೊಸದಿಲ್ಲಿ,ಅ.3: ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್ಸಿಬಿ)ವು ಶನಿವಾರ ರಾತ್ರಿ ಮುಂಬೈ ತೀರದಾಚೆ ವಿಹಾರ ನೌಕೆಯೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆಸಿ ಎಂಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದು,ಈ ಪೈಕಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ (23) ಸೇರಿದಂತೆ ನಾಲ್ವರನ್ನು ರವಿವಾರ ಬಂಧಿಸಲಾಗಿದೆ.ದಾಳಿಯ ಸಂದರ್ಭದಲ್ಲಿ 13 ಗ್ರಾಂ ಕೊಕೇನ್,21 ಗ್ರಾಂ ಚರಸ್,22 ಎಂಡಿಎಂಎ ಮಾತ್ರೆಗಳು ಮತ್ತು ಐದು ಗ್ರಾಂ ಎಮ್ಡಿ (ಮೆಫೆಡ್ರೋನ್)ಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ತಿಳಿಸಿದೆ. 

ನಿಷೇಧಿತ ಮಾದಕದ್ರವ್ಯಗಳ ಖರೀದಿ,ಅವುಗಳನ್ನು ಹೊಂದಿದ್ದ ಮತ್ತು ಬಳಸಿದ್ದ ಆರೋಪಗಳನ್ನು ಆರ್ಯನ್ ವಿರುದ್ಧ ಹೊರಿಸಲಾಗಿದೆ. ರವಿವಾರ ಸಂಜೆ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಸೋಮವಾರದವರೆಗೆ ಎನ್ಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಕೇವಲ ಚಾಟ್ ಸಂದೇಶಗಳ ಆಧಾರದಲ್ಲಿ ಆರ್ಯನ್ರನ್ನು ಬಂಧಿಸಲಾಗಿದೆ. ಅವರ ಬಳಿ ವಿಹಾರ ನೌಕೆಯ ಟಿಕೆಟ್,ಕ್ಯಾಬಿನ್ ಅಥವಾ ಸೀಟ್ ಇರಲಿಲ್ಲ. ಆಹ್ವಾನದ ಮೇರೆಗೆ ಮಾತ್ರ ಅವರು ನೌಕೆಯಲ್ಲಿದ್ದರು. ಅವರ ಬಳಿ ಬೋರ್ಡಿಂಗ್ ಪಾಸ್ ಕೂಡ ಇರಲಿಲ್ಲ. ಅವರ ಬಳಿ ಏನೂ ಪತ್ತೆಯಾಗಿಲ್ಲ ಎಂದು ವಾದಿಸಿದ ಆರ್ಯನ್ ಪರ ವಕೀಲ ಸತೀಶ ಮಾನಸಿಂಧೆ ಅವರು,ತನ್ನ ಕಕ್ಷಿದಾರನಿಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು.

ವಿಹಾರ ನೌಕೆಯಲ್ಲಿದ್ದ ಮೂನ್ಮೂನ್ ಧಮೇಚಾ,ನೂಪುರ್ ಸಾರಿಕಾ,ಇಸ್ಮೀತ್ ಸಿಂಗ್,ಮೋಹಕ್ ಜೈಸ್ವಾಲ್,ವಿಕ್ರಾಂತ ಚೋಕ್ಕರ್,ಗೋಮಿತ್ ಚೋಪ್ರಾ,ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚಂಟ್ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್ಸಿಬಿ ಈ ಮೊದಲು ಹೇಳಿಕೆಯಲ್ಲಿ ತಿಳಿಸಿತ್ತು.
ಎನ್ಸಿಬಿ ಅಧಿಕಾರಿಗಳ ತಂಡವು ಶನಿವಾರ ಬೆಳಿಗ್ಗೆ ಪ್ರಯಾಣಿಕರ ಸೋಗಿನಲ್ಲಿ ಗೋವಾಕ್ಕೆ ಪ್ರಯಾಣಿಸಲಿದ್ದ ಈ ವಿಹಾರ ನೌಕೆಯನ್ನು ಹತ್ತಿದ್ದರು. ಅಧಿಕಾರಿಗಳು ತಿಳಿಸಿರುವಂತೆ ನೌಕೆಯು ಮುಂಬೈ ಬಿಟ್ಟು ಸಮುದ್ರದ ಮಧ್ಯೆ ಇದ್ದಾಗ ಪಾರ್ಟಿ ಆರಂಭಗೊಂಡಿತ್ತು. ರಾತ್ರಿ 10 ಗಂಟೆಗೆ ಆರಂಭಗೊಂಡ ದಾಳಿ ರವಿವಾರ ನಸುಕಿನ ಎರಡು ಗಂಟೆಯವರೆಗೂ ಮುಂದುವರಿದಿತ್ತು.
 
ದಾಳಿ ಸಂದರ್ಭದಲ್ಲಿ ಶಂಕಿತರನ್ನು ಶೋಧಿಸಿದಾಗ ಅವರು ತಮ್ಮ ಉಡುಪುಗಳು,ಒಳಉಡುಪುಗಳು ಮತ್ತು ಪರ್ಸ್ ಗಳಲ್ಲಿ ಬಚ್ಚಿಟ್ಟುಕೊಂಡಿದ್ದ ವಿವಿಧ ಮಾದಕ ದ್ರವ್ಯಗಳು ಪತ್ತೆಯಾಗಿವೆ ಎಂದು ಎನ್ಸಿಬಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಖಾಸಗಿ ಲೈಫ್ ಸ್ಟೈಲ್ ಮತ್ತು ಫ್ಯಾಷನ್ ಚಾನೆಲ್ ವೊಂದು ನೌಕೆಯಲ್ಲಿ ಡ್ರಗ್ಸ್ ಪಾರ್ಟಿಯನ್ನು ಆಯೋಜಿಸಿತ್ತು ಮತ್ತು ಹಲವಾರು ವಿಐಪಿಗಳನ್ನು ಆಹ್ವಾನಿಸಿತ್ತು ಎನ್ನಲಾಗಿದೆ. ದಾಳಿ ನಡೆದಾಗ ಒಟ್ಟು 1,800 ಅತಿಥಿಗಳು ನೌಕೆಯಲ್ಲಿದ್ದರು.
ನೌಕೆಯಲ್ಲಿ ಪಾರ್ಟಿ ನಡೆಯುವ ಬಗ್ಗೆ 15 ದಿನಗಳ ಹಿಂದೆಯೇ ಮಾಹಿತಿ ಲಭಿಸಿತ್ತು ಮತ್ತು 22 ಅಧಿಕಾರಿಗಳ ತಂಡವು ವಿಐಪಿ ಪಾಸ್ ಗಳೊಂದಿಗೆ ಅತಿಥಿಗಳ ಸೋಗಿನಲ್ಲಿ ನೌಕೆಯನ್ನು ಪ್ರವೇಶಿಸಿತ್ತು ಎಂದು ಮುಂಬೈನಲ್ಲಿಯ ಎನ್ಸಿಬಿ ಮೂಲಗಳು ತಿಳಿಸಿವೆ.

ವಿಹಾರ ನೌಕೆಯ ಮಾಲಿಕತ್ವ ಹೊಂದಿರುವ ಕೊರ್ಡೆಲಿಯಾ ಕ್ರೂಸಸ್ ತನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಈ ಘಟನೆಗೂ ಕೊರ್ಡೆಲಿಯಾ ಕ್ರೂಸಸ್ಗೂ ನೇರವಾಗಿ ಅಥವಾ ಪರೋಕ್ಷವಾಗಿ,ಯಾವುದೇ ರೀತಿಯಿಂದಲೂ ಸಂಬಂಧವಿಲ್ಲ. ಕಂಪನಿಯು ಖಾಸಗಿ ಕಾರ್ಯಕ್ರಮವೊಂದಕ್ಕಾಗಿ ನೌಕೆಯನ್ನು ದಿಲ್ಲಿಯ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ನೀಡಿತ್ತು ಎಂದು ವಾಟರ್ವೇಸ್ ಲೀಸರ್ ಟೂರಿಸಂ ಪ್ರೈ.ಲಿ.ನ ಸಿಇಒ ಮತ್ತು ಅಧ್ಯಕ್ಷ ಜರ್ಗನ್ ಬೇಲಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಾವು ಇಂತಹ ಎಲ್ಲ ಕೃತ್ಯಗಳನ್ನು ಖಂಡಿಸುತ್ತೇವೆ ಮತ್ತು ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ನಮ್ಮ ನೌಕೆಯನ್ನು ಖಂಡಿತವಾಗಿಯೂ ನೀಡುವುದಿಲ್ಲ. ಆದಾಗ್ಯೂ ಕೊರ್ಡೆಲಿಯಾ ಕ್ರೂಸಸ್ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲಿದೆ ’ ಎಂದು ಹೇಳಿಕೆಯು ತಿಳಿಸಿದೆ.
ಮಹಾರಾಷ್ಟ್ರ ಸಮ್ಮಿಶ್ರ ಸರಕಾರದ ಪಾಲುದಾರನಾಗಿರುವ ಕಾಂಗ್ರೆಸ್,ದಾಳಿ ಮತ್ತು ನಂತರದ ಕಾರ್ಯಾಚರಣೆಗಳು ಇತ್ತೀಚಿಗೆ ಗುಜರಾತಿನ ಮುಂದ್ರಾಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದ ‘ನಿಜವಾದ ವಿಷಯ’ದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ. ಕಳೆದ ವರ್ಷ ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಅವರ ಸಾವು ಮತ್ತು ಮಾದಕ ದ್ರವ್ಯ ದಂಧೆಯ ಕುರಿತು ವ್ಯಾಪಕ ತನಿಖೆಯ ಬಳಿಕ ಎನ್ಸಿಬಿ ಮಾದಕ ದ್ರವ್ಯ ನಿಗ್ರಹಕ್ಕೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ.

ಕಳೆದ ತಿಂಗಳು ಕಂದಾಯ ಗುಪ್ತಚರ ನಿರ್ದೇಶನಾಲಯವು ಮುಂದ್ರಾ ಬಂದರಿನಲ್ಲಿ ಸುಮಾರು 3,000 ಕೆ.ಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ದಿಲ್ಲಿ ಮತ್ತು ಉತ್ತರ ಪ್ರದೇಶದ ನೊಯ್ಡಾದಿಂದಲೂ 37 ಕೆ.ಜಿ.ಗಳಷ್ಟು ಮಾದಕ ದ್ರವ್ಯ ಮತ್ತು ಕೊಕೇನ್ ವಶಪಡಿಸಿಕೊಂಡಿತ್ತು.

#WATCH | Narcotics Control Bureau (NCB) detained at least 10 persons during a raid conducted at a party being held on a cruise in Mumbai yesterday

(Visuals from outside NCB office) pic.twitter.com/yxe2zWfFmI

— ANI (@ANI) October 2, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X