ಮಂಗಳೂರು ಏರ್‌ಪೋರ್ಟ್‌ನಲ್ಲಿ ಚಿನ್ನ, ಸುಗಂಧ ದ್ರವ್ಯ ಅಕ್ರಮ ಸಾಗಾಟ; ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

ಮಂಗಳೂರು, ಅ.3: ಭಟ್ಕಳದ ವ್ಯಕ್ತಿಯೋರ್ವ ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಅ.2ರಂದು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.
24 ಕ್ಯಾರೆಟ್ ಪರಿಶುದ್ಧತೆಯ 201.200 ಗ್ರಾಂ ತೂಕದ 9,57,712 ರೂ. ಮೌಲ್ಯದ ಚಿನ್ನದ ಬಿಲ್ಲೆ, 24 ಗ್ರಾಂ ತೂಕದ 1,04,640 ರೂ. ಮೌಲ್ಯದ ಚಿನ್ನದ ನಾಣ್ಯ, 1,02,600 ರೂ. ವೌಲ್ಯದ ಆ್ಯಪಲ್ ಐಪೋನ್, 1,69,500 ರೂ. ಮೌಲ್ಯದ ಸುಗಂಧ ದ್ರವ್ಯದ 12 ಬಾಟಲಿಗಳನ್ನು ಜಫ್ತಿ ಮಾಡಿಕೊಂಡು ಪ್ರಕರಣೆ ದಾಖಲಿಸಿಕೊಳ್ಳಲಾಗಿದೆ ಎಂದು ಕಸ್ಮಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





