ಬೈಂದೂರು ತಾಲೂಕು ಮಸೀದಿ ಮದ್ರಸಗಳ ಹೊಣೆಗಾರರ ಸಮಾವೇಶ

ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ತಾಲೂಕು ವ್ಯಾಪ್ತಿಯ ಮಸೀದಿ ಮದ್ರಸಗಳ ಹೊಣೆಗಾರರು ಹಾಗೂ ತಾಲೂಕಿನ ಗಣ್ಯರ ಸಮಾವೇಶವು ನಾವುಂದ ಮೊಹಿಯುದ್ದೀನ್ ಜುವಾ ಮಸೀದಿಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಸಯ್ಯದ್ ಅಜಮಲ್ ಸಾಹೇಬ್ ಶಿರೂರು ಉದ್ಘಾಟಿಸಿದರು. ಮಾಜಿ ಜಿಲ್ಲಾಧ್ಯಕ್ಷ ಎಂ.ಪಿ.ಮೊಯಿದಿನಬ್ಬ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿಯನ್ನು ಹಾಗೂ ಹುಸೇನ್ ಕೊಡಿಬೆಂಗ್ರೆ ಕಾನೂನಿನ ಅರಿವನ್ನು ನೀಡಿದರು. ನಿಕಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆಒಕ್ಕೂಟದ ಕೆಲಸ ಕಾರ್ಯದ ಬಗ್ಗೆ ವಿಷಯ ಮಂಡಿಸಿದರು.
ಸಿಎ ಪದವಿ ಪಡೆದ ಮುಹಮ್ಮದ್ ಆದಿಲ್ ದಡ್ಡಿ ಶಿರೂರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮುಸ್ಲಿಂ ಒಕ್ಕೂಟದ ಹಿರಿಯ ಉಪಾಧ್ಯಕ್ಷ ರಶೀದ್ ಸಾಹೇಬ್ ಮಲ್ಪೆ, ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಪ್ರಾಸ್ತವಿಕವಾಗಿ ಮಾತನಾಡಿದರು. ಅಬ್ದುಲ್ ಲತೀಫ್ ಫಾಳಲಿ ಕಿರಾತ್ ಪಠಿಸಿದರು. ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಹಸನ್ ಮಾವಡ್ ಸ್ವಾಗತಿಸಿದರು. ಎಚ್.ಎಸ್. ಸಿದ್ದಿಕ್ ಸಾಹೇಬ್ ಶಿರೂರು ವಂದಿಸಿದರು. ಶೇಕ್ ಫಯಾಜ್ ಅಲಿ ಕಾರ್ಯ ಕ್ರಮ ನಿರೂಪಿಸಿದರು. ತಾಲೂಕಿನ ಸುಮಾರು 32 ಮಸೀದಿಗಳ ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ತಾಲೂಕು ಕಾರ್ಯದರ್ಶಿ ತಬ್ರೇಜ್ ನಾಗೂರ್, ಜೊತೆ ಕಾರ್ಯದರ್ಶಿ ಅಬು ಅಹ್ಮದ್ ಕೋಖ, ಸದಸ್ಯರಾದ ಎನ್.ಎಸ್.ರಿಜ್ವಾನ್ ಸಾಹೇಬ್ ನಾಗೂರ್, ಟಿ.ಎಫ್.ಎಸ್.ಅಬ್ಬಾಸ್ ನಾವುಂದ, ಅಮೀರ್ ಹುಸೇನ್ ನಾಗೂರ್, ಮನೆಗಾರ್ ಜಿಫ್ರಿ ಸಾಹೇಬ್, ಸಮಿ ಹಲಗೇರಿ, ಖುರ್ಶಿದ್ ಆಲಂ ಹಭಿಬುಲ್ಲ, ದಬಾಪು ಬಾಪು ಸಾಹೇಬ್ ಬೈಂದೂರು ಉಪಸ್ಥಿತರಿದ್ದರು.







