ಉಡುಪಿ: ಸಿಡಿಲು ಬಡಿದು ಮನೆಗೆ ಹಾನಿ
ಉಡುಪಿ, ಅ.3: ಉಡುಪಿ ಜಿಲ್ಲೆಯಾದ್ಯಂತ ಕಳೆದ 24ಗಂಟೆಯ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಗಿರಿಜಾ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿ 10,000ರೂ. ನಷ್ಟ ಉಂಟಾಗಿದೆ.
ಉಡುಪಿ- 24.2ಮಿ.ಮೀ., ಬ್ರಹ್ಮಾವರ-19.0ಮಿ.ಮೀ., ಕಾಪು- 47.2 ಮಿ.ಮೀ., ಕುಂದಾಪುರ- 31.4ಮಿ.ಮೀ., ಬೈಂದೂರು- 37.0ಮಿ.ಮೀ., ಕಾರ್ಕಳ- 22.25ಮಿ.ಮೀ., ಹೆಬ್ರಿ- 4.2ಮಿ.ಮೀ. ಮಳೆಯಾಗಿದೆ. ಜಿಲ್ಲೆ ಯಲ್ಲಿ ಸರಾಸರಿ 26.46ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
Next Story





