ಮಂಗಳೂರು: ಯುವತಿಯರ ಜೊತೆ ಚಿಲಿಂಬಿಗುಡ್ಡಕ್ಕೆ ತೆರಳಿದ್ದ ಇಬ್ಬರು ಯುವಕರ ಬಂಧನ
ಮಂಗಳೂರು: ನಗರ ಹೊರವಲಯದ ಗುರುಪುರದ ಚಿಲಿಂಬಿಗುಡ್ಡಕ್ಕೆ ಯುವತಿಯರ ಜೊತೆ ತೆರಳಿದ್ದ ಇಬ್ಬರು ಯುವಕರನ್ನು ಬಜ್ಪೆ ಪೊಲೀಸರು ರವಿವಾರ ಸಂಜೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೋಂದೆಲ್ ನಿವಾಸಿ ಧೀರಜ್ ಮತ್ತು ಪಂಜಿಮೊಗರಿನ ಶಾಕೀರ್ ಬಂಧಿತ ಆರೋಪಿಗಳು.
ಯುವಕ-ಯುವತಿಯರ ಗುಂಪು ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಸಂಘಟನೆಯೊಂದರ ಕಾರ್ಯಕರ್ತರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಯುವತಿಯರಿಬ್ಬರ ಮನೆಯವರಿಗೂ ಪೊಲೀಸರು ಮಾಹಿತಿ ರವಾನಿಸಿದ್ದರು.
ಇಬ್ಬರು ಯುವತಿಯರಲ್ಲಿ ಒಬ್ಬಾಕೆ ಅಪ್ರಾಪ್ತೆಯಾಗಿದ್ದು, ಆಕೆಯ ಪೋಷಕರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. 16 ವರ್ಷದ ಹುಡುಗಿಯನ್ನು ಬಲವಂತದಿಂದ ಕರೆದೊಯ್ದಿದ್ದಾರೆ ಎಂದು ಆಕೆಯ ತಾಯಿ ಯುವಕರ ವಿರುದ್ಧ ದೂರು ನೀಡಿದ್ದು ಅದರಂತೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
Next Story





