ಗುಂಪುಗಳನ್ನು ಕಟ್ಟಿಕೊಂಡು ಪ್ರತಿಭಟನಾ ನಿರತ ರೈತರ ವಿರುದ್ಧ ಬಲ ಪ್ರಯೋಗಿಸಲು ರೈತರಿಗೇ ಕರೆ ನೀಡಿದ ಹರ್ಯಾಣ ಸಿಎಂ
"ಜೈಲಿಗಟ್ಟಿದರೆ ಚಿಂತಿಸಬೇಡಿ, ನೀವು ದೊಡ್ಡ ನಾಯಕರಾಗುತ್ತೀರಿ"

ಹೊಸದಿಲ್ಲಿ: ಪ್ರತಿಭಟಿಸುತ್ತಿರುವ ರೈತರಿಗೆ ಜೈಸೆ ಕೊ ತೈಸಾ (ಮುಯ್ಯಿಗೆ ಮುಯ್ಯಿ) ತೋರಿಸಲು 700-1000 ಜನರ ಗುಂಪುಗಳನ್ನು ರಚಿಸಬೇಕು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರವಿವಾರ ಚಂಡೀಗಢದಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ಸಭೆಯನ್ನುದ್ದೇಶಿಸಿ ಹೇಳಿ ವಿವಾದಕ್ಕೀಡಾಗಿದ್ದಾರೆ.
"ಉತ್ತರ ಮತ್ತು ಪಶ್ಚಿಮ ಹರ್ಯಾಣಾದ ಪ್ರತಿಯೊಂದು ಜಿಲ್ಲೆಯಲ್ಲಿ ನೀವು 700-1000 ರೈತರ ಸ್ವಯಂಸೇವಾ ಗುಂಪುಗಳನ್ನು ರಚಿಸಬೇಕು ಹಾಗೂ ಅವರ (ಪ್ರತಿಭಟನಾ ನಿರತ ರೈತರ) ವಿರುದ್ಧ ಮುಯ್ಯಿಗೆ ಮುಯ್ಯಿ ತೀರಿಸಬೇಕು. ಬೆತ್ತಗಳನ್ನು ಎತ್ತಿಕೊಳ್ಳಿ" ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
"ಮೂರರಿಂದ ಆರು ತಿಂಗಳು ಜೈಲಿಗೆ ಅಟ್ಟಿದರೆ ಚಿಂತಿಸಬೇಡಿ, ನೀವು ದೊಡ್ಡ ನಾಯಕರಾಗುತ್ತೀರಿ, ನಿಮ್ಮ ಹೆಸರು ಇತಿಹಾಸಲ್ಲಿ ಸೇರುತ್ತದೆ" ಎಂದೂ ಅವರು ಹೇಳಿದ್ದಾರೆ.
ಖಟ್ಟರ್ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ವಿಪಕ್ಷ ನಾಯಕರಿಂದ ತೀವ್ರ ಟೀಕೆಗೊಳಗಾಗಿದೆ. ಖಟ್ಟರ್ ತಮ್ಮ ಈ ಹೇಳಿಕೆಗಳಿಗೆ ರಾಜೀನಾಮೆ ನೀಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ.
ಆದರೆ ಸೀಎಂ ಕುರಿತು ತಪ್ಪು ಅಭಿಪ್ರಾಯ ಮೂಡಿಸಲು ಅವರ ಭಾಷಣದ ಒಂದು ತುಣುಕನ್ನು ಬಳಸಿಕೊಳ್ಳಲಾಗಿದೆ ಎಂದು ಖಟ್ಟರ್ ಅವರ ಮಾಧ್ಯಮ ಸಲಹೆಗಾರ ಅಮಿತ್ ಆರ್ಯ ಹೇಳಿದ್ದಾರೆ.
In a functioning #democracy - #ManoharLalKhattar would have to step down for such horrid / violent statements! @amnesty
— H.K. (@_H_K_1_3_) October 3, 2021
Provoking violence / terror against farmers, and even indicating to reward it! @BBCHindi @bbcnewspunjabi https://t.co/TbBqb2sBDP
Now #ManoharLalKhattar gives full encouragement and impunity to violence against farmers who have been fighting pro-corporate farm laws for the past many months
— Shambhavi Sharma (@sshambhavii) October 3, 2021
Immediately arrest Ashish Mishra Teni and all murderers in #LakhimpurKheri! #repealfarmlaws pic.twitter.com/Tvla3C18AJ