ಮಟಪಾಡಿ: ಸಾರ್ವಜನಿಕ ಹಿಂದೂ ರುದ್ರಭೂಮಿ ಮಂಜೂರು

ಬ್ರಹ್ಮಾವರ, ಅ.4: ಹಂದಾಡಿ ಗ್ರಾಪಂ ವ್ಯಾಪ್ತಿಯ ಮಟಪಾಡಿ ಗ್ರಾಮಕ್ಕೆ ಸಾರ್ವಜನಿಕ ಹಿಂದೂ ರುದ್ರ ಭೂಮಿ ಗ್ರಾಮದ ಬಲ್ಜಿಯ ಬಳಿಯಲ್ಲಿ ಸರ್ವೆ ನಂಬರ್ 92-3ರಲ್ಲಿ 98 ಸೆಂಟ್ಸ್ ಜಾಗವನ್ನು ಮಂಜೂರು ಮಾಡಲಾಗಿದ್ದು, ಇದರ ಸರ್ವೆ ಕಾರ್ಯ ಸೋಮವಾರ ಜರಗಿತು.
ಸರ್ವೆ ಸ್ಥಳದಲ್ಲಿ ಹಂದಾಡಿ ಗ್ರಾಪಂ ಅಧ್ಯಕ್ಷ ಉದಯ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ್, ಗ್ರಾಮ ಲೆಕ್ಕಧಿಕಾರಿ ಸೌಮ್ಯ, ಗ್ರಾಮ ಕರಣಿಕರಾದ ಹರೀಶ್, ಪಂಚಾಯತ್ ಸದಸ್ಯರಾದ ಅಶೋಕ ಪೂಜಾರಿ, ಪವಿತ್ರ ನಾಯಕ್, ಶೇಖರ್, ಜ್ಯೋತಿ ಭಾಯಿ, ಭಾನುಮತಿ ಉಪಸ್ಥಿತರಿದ್ದರು.
Next Story





