ದೇಶಕ್ಕೆ ನೆರಳು ನೀಡಿದವರು ಗಾಂಧೀಜಿ: ಪ್ರೊ.ಎನ್.ಎಂ.ಹೆಗಡೆ

ಉಡುಪಿ, ಅ.4: ದೇಶಕ್ಕೆ ನೆರಳು ನೀಡಿದ ಮಹಾನ್ ಚೇತನ ಗಾಂಧೀಜಿ. ನುಡಿದಂತೆ ನಡೆ, ನಡೆದಂತೆ ನುಡಿ ಎಂಬ ವಾಕ್ಯಕ್ಕೆ ತಕ್ಕುದಾಗಿ ನಡೆದುಕೊಂಡರು. ಇವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬದುಕಬೇಕು ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಉಪನ್ಯಾಸಕ ಪ್ರೊ.ನಾರಾಯಣ ಎಂ.ಹೆಗಡೆ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಶನಿವಾರ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ಗಾಂಧೀ ಜಯಂತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಕಾಲೇಜಿನ ಪ್ರಾಂಶುಪಲ ಡಾ.ವಿನ್ಸೆಂಟ್ ಆಳ್ವ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಜಯರಾಮ ಶೆಟ್ಟಿಗಾರ್, ಪಿಆರ್‌ಓ ರವಿನಂದನ್ ಭಟ್, ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಅನುಪಮಾ ಜೋಗಿ, ಮೆಲ್ಸನ್ ಡಿಸೋಜ, ಎನ್‌ಎಸ್‌ಎಸ್ ವಿದ್ಯಾರ್ಥಿ ನಾಯಕರಾದ ಮಂಜುನಾಥ್, ಸುವಾಗ್, ಪವನ್, ಶ್ರೇಯಾ ಹಾಗೂ ವರ್ಷಿಣಿ ಉಪಸ್ಥಿತರಿದ್ದರು.
ಶ್ವೇತ ಸ್ವಾಗತಿಸಿ, ಗೌರವ್ ವಂದಿಸಿ, ಕುಮಾರಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ನಂತರ ಎನ್‌ಎಸ್‌ಎಸ್ ಸ್ವಯಂ ಸೇವಕರಿಂದ ಕಾಲೇಜಿನ ಪರಿಸರದಲ್ಲಿ ಶ್ರಮದಾನ ಕಾರ್ಯಕ್ರಮ ಜರಗಿತು.







