ಅ.5ರಂದು ಉಡುಪಿ ಜಿಲ್ಲೆಯಲ್ಲಿ ಲಸಿಕೆ ಲಭ್ಯತೆ ವಿವರ
ಉಡುಪಿ, ಅ.4: ಜಿಲ್ಲೆಯಲ್ಲಿ ಅ.5ರ ಮಂಗಳವಾರ ಕೋವಿಡಜ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯವಿದೆ. 18 ವರ್ಷ ಮೇಲ್ಪಟ್ಟವರು ಪ್ರಥಮ ಡೋಸ್ ಕೋವಿಡ್ ಲಸಿಕೆ ಹಾಗೂ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನ ಪೂರ್ಣಗೊಂಡವರು 2ನೇ ಡೋಸ್ ಲಸಿಕೆಯನ್ನು ಪಡೆಯಬಹುದು ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಇಂದು ಲಸಿಕೆ ಲಭ್ಯವಿರುವ ಕೇಂದ್ರ.ಜಿಲ್ಲಾಸ್ಪತ್ರೆ ಆವರಣ ದಲ್ಲಿರುವ ಜಿಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಪ್ರಥಮ ಮತ್ತು 2ನೇ ಡೋಸ್-150, ಉಡುಪಿ ನಗರ ಪ್ರಾಥಮಿಕ ಕೇಂದ್ರದ ಅಲಂಕಾರ್ ಥಿಯೇಟರ್ ಪಕ್ಕದ ಹಳೆ ಕಟ್ಟಡದಲ್ಲಿ ಕೋವಿಶೀಲ್ಡ್ ಲಸಿಕೆ 100 ಡೋಸ್ ಹಾಗೂ ಕೋವ್ಯಾಕ್ಸಿನ್ 2ನೇ ಡೋಸ್ 100 ಲಭ್ಯವಿದೆ.
ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಧವಕೃಪಾ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ 500, ಕೋವ್ಯಾಕ್ಸಿನ್ 2ನೇ ಡೋಸ್ 500, ಕುಕ್ಕಿಕಟ್ಟೆ ಎಫ್‌ಸಿಎಐನ ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್ 100 ಡೋಸ್, ಕೋವ್ಯಾಕ್ಸಿನ್ 2ನೇ ಡೋಸ್ 50 ಹಾಗೂ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ 200 ಡೋಸ್ ಲಭ್ಯವಿದೆ.
ನವೆಂಬರ್ 15ರೊಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನ ಪೂರ್ಣಗೊಂಡವರಿಗೆ 2ನೇ ಡೋಸ್ ಲಸಿಕೆಯನ್ನು ಸರಕಾರಿ ತಾಯಿ ಮತ್ತು ಮಕ್ಕಳ (ಬಿಆರ್‌ಎಸ್) ಆಸ್ಪತ್ರೆಯಲ್ಲಿ ನೀಡಲಾಗುತ್ತದೆ.
ಇನ್ನು ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಸಮೀಪದ ಸರಕಾರಿ ಆಸ್ಪತ್ರೆಗೆ ಬರಬಹುದು. ಅಥವಾ ಆಶಾಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.







