ಇಸ್ಪೀಟ್ ಜುಗಾರಿ : 15 ಮಂದಿ ಆರೋಪಿಗಳ ಬಂಧನ
ಬೈಂದೂರು, ಅ.4: ಯಳಜಿತ್ ಗ್ರಾಮದ ಗುಳ್ನಾಡಿ ಹಾಡಿ ಬಳಿ ಅ.2ರಂದು ಸಂಜೆ ಇಸ್ಪೀಟ್ ಜುಗಾರಿ ಆಡುತ್ತಿದ್ದ 15 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಪೂಜಾರಿ(42), ಮೋಹನ ಕೊಠಾರಿ(42), ದಯಾನಂದ ಗೌಡ (45), ಗಣಪತಿ ಗೌಡ(37), ರಾಘವೇಂದ್ರ ದೇವಾಡಿಗ(38), ಚಂದ್ರ ನಾಯ್ಕ(36), ಗಣೇಶ ನಾಯ್ಕ(35), ರಮೇಶ ನಾಯ್ಕ(38), ಕರುಣಾಕರ ಕೊಠಾರಿ(23), ಸಂತೋಷ ಕೊಠಾರಿ(26), ಮಧು ಬಳೆಗಾರ(35), ಸುಧಾಕರ ಕೊಠಾರಿ(39), ದಿನೇಶ ಕೊಠಾರಿ(36), ಕೃಷ್ಣ ಗೌಡ(34), ಜಯಾ ಗೌಡ (45) ಬಂಧಿತ ಆರೋಪಿಗಳು. ಇವರಿಂದ 10,400 ರೂ. ನಗದು ವಶಪಡಿಸಿ ಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





