ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಿಂಚಿದ ಮಂಗಳೂರಿನ ಈಜು ಪಟುಗಳು: 7 ಮಂದಿ ರಾಷ್ಟ್ರ ಮಟ್ಟಕ್ಜೆ ಆಯ್ಕೆ

ಮಂಗಳೂರು ; ಕರ್ನಾಟಕ ಈಜು ಸಂಸ್ಥೆ ವತಿಯಿಂದ ಬೆಂಗಳೂರಿನ ಬಸವನಗುಡಿ ಸ್ವಿಮಿಂಗ್ ಕ್ಲಬ್ ಈಜು ಕೊಳದಲ್ಲಿ ನಡೆದ ಜೂನಿಯರ್ ಹಾಗೂ ಸಬ್ ಜೂನಿಯರ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಂಗಳೂ ರಿನ ಈಜು ಪಟುಗಳು ಒಟ್ಟು 33 ಪದಕಗ ಳನ್ನು ಗೆದ್ದುಕೊಂಡಿದ್ದಾರೆ.
ವಿಜೇತರು ಪೈಕಿ ಒಬ್ಬರು ವೈಯಕ್ತಿಕ ಚಾಂಪಿಯನ್ ಶಿಪ್ ಸಾಧನೆ ಮತ್ತು ಇನ್ನೊಬ್ಬರು ಕೂಟ ದಾಖಲೆ ಸೃಷ್ಟಿಸಿದ್ದಾರೆ. ಏಳು ಈಜು ಪಟುಗಳು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿ ಸಲು ಅರ್ಹತೆ ಪಡೆದಿದ್ದಾರೆ ಎಂದು ಸೈಂಟ್ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ತರಬೇತಿ ನೀಡುತ್ತಿರುವ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂಕಷ್ಟಮಯ ಸಂದರ್ಭದ ಹಲವು ಅಡೆತಡೆಗಳ ಹೊರತಾಗಿ ಕೂಡ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಈಜು ಪಟುಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.
ವಿಜೇತರು ಗೆದ್ದು ಕೊಂಡಿರುವ ಒಟ್ಟು, ಪದಕಗಳು 13 ಬಂಗಾರ ಮತ್ತು13 ಬೆಳ್ಳಿ ಹಾಗೂ 7 ಕಂಚಿನ ಪದಕಗಳು ಸೇರಿವೆ. ಸೈಂಟ್ ಅಲೋಶಿಯಸ್ ಕಾಲೇಜು ವಿ ನನ್ ಎಕ್ವಾ ಸೆಂಟರ್ ಮತ್ತು ಡಾನ್ ಆಸ್ಟಿಕ್ ಕಬ್ ಈಜು ತರಬೇತುದಾರರು ತರಬೇತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಲಿಸ್ಸಾ ಎಸ್.ರೇಗೊ ವೈಯಕ್ತಿಕ ಚಾಂಪಿಯನ್ ಶಿಪ್ ಜೊತೆಗೆ 100 ಮತ್ತು 200 ಮೀಟರ್ ಫ್ರೀಸ್ಟೈಲ್, 50 ಮತ್ತು 100 ಮೀಟರ್ ಬಟರ್ ಫೆ 200 ಮೀಟರ್ ಮೈಯಕ್ತಿಕ ಮೆಡಲ್ ವಿಭಾಗದಲ್ಲಿ ಬಂಗಾರ ಮತ್ತು 50 ಮೀಟರ್ ಫೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 4×200 ರಿಲೆ ವಿಭಾಗದಲ್ಲಿ ಧೃತಿ ಫರ್ನಾಂಡಿಸ್ ಒಂದು ಹೊಸ ಕೂಟ ದಾಖಲೆ ಸೃಷ್ಟಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದ ಏಳು ಈಜು ಪಟುಗಳಲ್ಲಿ ನೈತಿಕ್ ಎನ್,ಅಲಿಸ್ಸಾ ಸ್ವಿಡಲ್ ರೇಗೋ, ದ್ವಿಶಾ ಎನ್ ಶೆಟ್ಟಿ, ಅಲೆಸ್ಟರ್ ಎಸ್ .ರೇಗೋ, ಸ್ಟೀವ್ ಜೆಫ್ ಲೋಬೊ, ಧೃತಿ ಫರ್ನಾಂಡೀಸ್ ಮತ್ತು ದಿಗಂತ್ ವಿ.ಎಸ್ ಸೇರಿದ್ದಾರೆ.ಭಾರತೀಯ ಈಜು ಒಕ್ಕೂಟದ ವತಿಯಿಂದ ನಡೆಯುವ ರಾಷ್ಟ್ರಮಟ್ಟದ ಈಜು ಸ್ಪರ್ಧೆ ಬೆಂಗಳೂರಿನ ಬಸವನಗುಡಿ ಈಜುಕೊಳ ದಲ್ಲಿ ಅ. 19ರಂದು ನಡೆಯಲಿದೆ ಎಂದು ಲೋಕರಾಜ್ ತಿಳಿಸಿದ್ದಾರೆ.
ಪದಕ ವಿಜೇತರ ವಿವರ ಈ ಕೆಳಗಿನಂತಿದೆ
ಗ್ರೂಪ್ 3 ಬಾಲಕರು: ನೈತಿಕ್ ಎನ್ ( 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಬಂಗಾರ, 200 ಮೀಟರ್ ವೈಯಕ್ತಿಕ ಮತ್ತು 100 ಮೀಟರ್ ಬಟರ್ ಫೈ ವಿಭಾಗದಲ್ಲಿ ಬೆಳ್ಳಿ, 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು)
ಗುಂಪು 2 ಬಾಲಕರ ವಿಭಾಗದಲ್ಲಿ:- ಅಲೈಸ್ಟರ್ ಸ್ಪ್ಯಾಮ್ಯುಯೆಲ್ ರೇಗೊ - 1500 ಮೀಟರ್ ಫೀಸ್ಟೈಲ್, 400 ಮೀಟರ್ ಫ್ರೀಸ್ಟೈಲ್, 800 ಮೀಟರ್ ಫ್ರೀಸ್ಟೈಲ್ ಮತ್ತು 200 ಮೀಟರ್ ಪ್ರೀಸ್ಟೈಲ್ ವಿಭಾಗಗಳಲ್ಲಿ 4 ಬಂಗಾರ ಮತ್ತು ಎಲ್ಲಾ ರಿಲೇ ವಿಭಾಗಗಳಲ್ಲಿ 3 ಬಂಗಾರ, ಸ್ಟೀವ್ ಜೆಫ್ ಲೋಭೂ- 100 ಮೀಟರ್ ಮತ್ತು 200 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ 2 ಬೆಳ್ಳಿ, 50 ಮೀಟರ್ ಬಟರ್ ಫ್ಲೈ ವಿಭಾಗದ ಲ್ಲಿ, ಕಂಚು, ರಿಲೇ ವಿಭಾಗದಲ್ಲಿ ಎರಡು ಬಂಗಾರ ಮತ್ತು 1 ಕಂಚು ; ನಿಶಾನ್ 4x200 ರಿಲೇ ವಿಭಾಗದಲ್ಲಿ ಬಂಗಾರ, ದಿಗಂತ್ ವಿ. ಎಸ್. - 200 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ, 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಕಂಚು, 2ನೆ ಗುಂಪು ಬಾಲಕಿಯರ ವಿಭಾಗದಲ್ಲಿ ರೈನಾ ಧೃತಿ ಫರ್ನಾಂಡಿಸ್ 200 ವೈಯಕ್ತಿಕ ಮತ್ತು 100 ಮೀಟರ್ ಬ್ರೆಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ 200 ಮೀಟರ್ ಬ್ರೆಸ್ಟ್ರೋಕ್ ಮತ್ತು 400 ಮೀಟರ್ ವೈಯಕ್ತಿಕ ಪದಕ 2 ರಿಲೇ ವಿಭಾಗದಲ್ಲಿ 1 ಬಂಗಾರ ಮತ್ತು 1 ಕಂಚು, ದ್ವಿಶಾ ಶೆಟ್ಟಿ 50 ಮೀಟರ್ ಬ್ರೆಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ 10 0 ಮೀಟರ್ ಬ್ರೆ ಸ್ಟ್ರೋಕ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಪಿಂಟೋ, ಜೆಸುಯಿಟ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ವಂ.ಸಿರಿಲ್, ಎಂ.ಎ.ಸಿ ಅಧ್ಯಕ್ಷ ಡಾ. ನಾಗೇಂದ್ರ ನಾಯಕ್, ವಿ ಎನ್ ಎಕ್ವಾ ಸೆಂಟರ್ ಪೋಷಕರಾದ ನವೀನ್ ಮತ್ತು ರೂಪಾ ಜಿ, ತರಬೇತು ದಾರರಾದ ಚಿದಾನಂದ ಹೆಗ್ಡೆ,ಯಜ್ಞೇಶ್ ಮೊದಲಾದವರು ಉಪಸ್ಥಿತರಿದ್ದರು.








