Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೈಂದಡ್ಕ ಮೈದಾನ ಗ್ರಾ.ಪಂ.ಗೆ ಹಸ್ತಾಂತರ;...

ಮೈಂದಡ್ಕ ಮೈದಾನ ಗ್ರಾ.ಪಂ.ಗೆ ಹಸ್ತಾಂತರ; ದಾರಿಯನ್ನು ಯಥಾ ಸ್ಥಿತಿಯಲ್ಲಿಡಬೇಕೆಂದು ಎಸಿ ಆದೇಶ

ವಾರ್ತಾಭಾರತಿವಾರ್ತಾಭಾರತಿ4 Oct 2021 10:23 PM IST
share
ಮೈಂದಡ್ಕ ಮೈದಾನ ಗ್ರಾ.ಪಂ.ಗೆ ಹಸ್ತಾಂತರ; ದಾರಿಯನ್ನು ಯಥಾ ಸ್ಥಿತಿಯಲ್ಲಿಡಬೇಕೆಂದು ಎಸಿ ಆದೇಶ

ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ 0.57 ಎಕ್ರೆ ಭೂಮಿಯನ್ನು ಸಾರ್ವಜನಿಕ ಆಟದ ಮೈದಾನವನ್ನಾಗಿ ಬಳಸಿಕೊಳ್ಳಲು ಸ್ಥಳೀಯ ಗ್ರಾ.ಪಂ. ಅಧೀನಕ್ಕೆ ಒಪ್ಪಿಸಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದು, ಈ ಜಮೀನಿನಲ್ಲಿ ಊರ್ಜಿತವಿರುವ ರಸ್ತೆಯನ್ನು ಆತಂಕಿಸತಕ್ಕದ್ದಲ್ಲವೆಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ಮೈಂದಡ್ಕದಲ್ಲಿರುವ 88/1 ಸರ್ವೆ ನಂಬರ್‌ನಲ್ಲಿ ಸುಮಾರು ಎರಡು ಎಕ್ರೆಯಷ್ಟು ಸ್ಥಳವು ಅನಿಲ್ ಮಿನೇಜಸ್ ಎಂಬವರ ಖದೀಮ ವರ್ಗದ ಕುಮ್ಕಿಯಾಗಿದ್ದು, ಅದರಲ್ಲಿ 0.55 ಎಕ್ರೆ ಜಾಗವು ಮೈದಾನಕ್ಕೆ ಪ್ರಸಕ್ತವಾದ ಸ್ಥಳವಾಗಿತ್ತು. ಗ್ರಾಮಕ್ಕೊಂದು ಆಟದ ಮೈದಾನ ಬೇಕು. ಇದು ಸಾರ್ವಜನಿಕರ ಉಪಯೋಗಕ್ಕೆ ಬರಬೇಕೆಂಬ ಉದ್ದೇಶದಿಂದ 2015ರಲ್ಲಿ ಈ ಕುಮ್ಕಿ ಜಾಗದಲ್ಲಿ 0.55 ಎಕ್ರೆ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆ ಬಿಟ್ಟುಕೊಡಬೇಕೆಂದು ಜತೀಂದ್ರ ಶೆಟ್ಟಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯದಲ್ಲಿ ಅನಿಲ್ ಮಿನೇಜಸ್ ಹಾಗೂ ಜತೀಂದ್ರ ಶೆಟ್ಟಿಯವರು ರಾಜಿ ಡಿಕ್ರಿಯ ಮೂಲಕ ಈ ಪ್ರಕರಣವನ್ನು ಬಗೆಹರಿಸಿದ್ದು,  ನ್ಯಾಯಾಲಯವು ಮೈಂದಡ್ಕದಲ್ಲಿರುವ ಆ ಭೂಮಿಯನ್ನು ವಿಭಾಗಿಸಿ ಸರ್ವೆ ನಂಬರ್ 88/1 ರಲ್ಲಿ ಮೈದಾನಕ್ಕೆ ಪ್ರಸಕ್ತವಾದ 0.55 ಎಕ್ರೆ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆಂದು ನೀಡಿ ಆದೇಶಿಸಿತ್ತಲ್ಲದೆ, ಮೈದಾನದ ಜಾಗವನ್ನು ನಕ್ಷೆಯಲ್ಲಿ ಸ.ನಂ.88/1ಪಿ1 ಎಂದು ವಿಭಾಗಿಸಿ, ಅನಿಲ್ ಮಿನೇಜಸ್ ಅವರ ಕುಮ್ಕಿಯ ಜಾಗವನ್ನು ೮೮/೧ಪಿ೨ ಮುತ್ತು ೯೨/೧ಪಿ೧ಎಂದು ವಿಭಾಗಿಸಿ, ಈ ಜಾಗವನ್ನು  ಅನಿಲ್ ಮಿನೇಜಸ್ ಅವರು ಕುಮ್ಕಿಯೆಂದು ಅನುಭವಿಸಲು ಆದೇಶ ನೀಡಿತ್ತು. ಬಳಿಕ ಮೈದಾನದ ಜಾಗವು ಕಂದಾಯ ಇಲಾಖೆಯ ಅಧೀನದಲ್ಲಿದ್ದರೂ, ಅದು ಮೈದಾನಕ್ಕಾಗಿಯೇ ಬಳಕೆಯಾಗುತ್ತಿತ್ತು. ಆದರೆ 34 ನೆಕ್ಕಿಲಾಡಿ ಗ್ರಾ.ಪಂ.ನ ಈಗಿನ ಆಡಳಿತ ಕೆಲವು ತಿಂಗಳ ಹಿಂದೆ ಇಲ್ಲಿ ಜೆಸಿಬಿ ಮೂಲಕ ತೋಡಿನಂತಹ ಚರಂಡಿಯನ್ನು ನಿರ್ಮಿಸಿ ಮೈದಾನಕ್ಕೆ ಈ ಮೊದಲಿನಿಂದಲೇ ಊರ್ಜಿತದಲ್ಲಿದ್ದ ದಾರಿಯನ್ನು ಮುಚ್ಚಿ ಹಾಕಿತ್ತಲ್ಲದೆ, ಮಣ್ಣನ್ನು ಮೈದಾನದ ಸುತ್ತಲೂ ಅಗಲು (ಅಗರಿ)ನಂತೆ ರಾಶಿ ಹಾಕಿತ್ತು. ಇನ್ನೊಂದು ಬದಿ ಅರಣ್ಯ ಇಲಾಖೆಯ ಜಾಗವನ್ನು ಇಳಿಜಾರುಗೊಳಿಸಿ ಅದರ ಮಣ್ಣನ್ನು ಮೈದಾನಕ್ಕೆ ತಂದು ಅಗಲು ಕಾಮಗಾರಿಯಂತೆ ರಾಶಿ ಹಾಕಿತ್ತು.

ಇಲ್ಲಿ ನೀರು ಹೋಗಲು ದಾರಿಯಿಲ್ಲದಂತಾಗಿ ಈ ಜಾಗವು ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಕೆರೆಯಂತಾಯಿತ್ತಲ್ಲದೆ, ಈ ನೀರು ಹೋಗಲು ಜಾಗವಿಲ್ಲದೆ, ಮೈದಾನದೊಳಗೆ ರಾಶಿ ಹಾಕಿರುವ ಮಣ್ಣನ್ನು ಕೊಚ್ಚಿಕೊಂಡು ಮೈದಾನದ ಮೂಲಕ ಹರಿಯಿತು. ಇದರಿಂದ ಮೈದಾನ ಹಾಳಾಗುವಂತಾಯಿತು. ಮೈದಾನದ ಸುತ್ತಲೂ ಗ್ರಾ.ಪಂ. ಅವೈಜ್ಞಾನಿಕ ಕಾಮಗಾರಿ ನಡೆಸಿರುವುದು ಹಾಗೂ ಮೈದಾನದೊಳಗೆ ಮಣ್ಣು ರಾಶಿ ಹಾಕಿ ಮೈದಾನವನ್ನು ಹಾಳುಗೆಡವಿರುವುದು, ಊರ್ಜಿತವಿದ್ದ ದಾರಿಯನ್ನು ಮುಚ್ಚಿರುವ ವಿರುದ್ಧ `ನಮ್ಮೂರು- ನೆಕ್ಕಿಲಾಡಿ' ಅಧ್ಯಕ್ಷ ಜತೀಂದ್ರ ಶೆಟ್ಟಿಯವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ಈ ಅರ್ಜಿಯು ವಿಚಾರಣೆಯಲ್ಲಿದ್ದು, ಎಸಿ, ತಹಶೀಲ್ದಾರ್ ಹಾಗೂ 34 ನೆಕ್ಕಿಲಾಡಿ ಪಿಡಿಒ ಅವರಿಗೆ ನೊಟೀಸ್ ಜಾರಿಯಾಗಿತ್ತು. ಈ ನಡುವೆ ಗ್ರಾ.ಪಂ.ನ ಇದನ್ನು ಆಟದ ಮೈದಾನವನ್ನಾಗಿ ಬಳಸಿಕೊಳ್ಳಲು ಗ್ರಾ.ಪಂ.ಗೆ ಹಸ್ತಾಂತರ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಕೋರಿ  ನಿರ್ಣಯ ಕೈಗೊಂಡಿದ್ದು, ಅದಂತೆ ಈ ಆಟದ ಮೈದಾನವನ್ನು 34 ನೆಕ್ಕಿಲಾಡಿ ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಈ ಜಮೀನಿನಲ್ಲಿ ಊರ್ಜಿತವಿರುವ ರಸ್ತೆಯನ್ನು ಆತಂಕಿಸಬಾರದು, ಯಾವುದೇ ಕಾರಣಕ್ಕೂ ಅತಿಕ್ರಮಣಕ್ಕೆ ಎಡೆ ಮಾಡಿಕೊಡಬಾರದು, ಯಾವುದೇ ಸಂದರ್ಭದಲ್ಲಿ ಸರಕಾರಕ್ಕೆ ಅಗತ್ಯವೆನಿಸಿದರೆ ಸೂಚನೆ ನೀಡದೇ ಈ ಜಮೀನನ್ನು ವಾಪನ್ನು ಪಡೆದುಕೊಳ್ಳುವ ಷರತ್ತನ್ನು ಕಾಯ್ದಿರಿಸಿರುವುದು ಸೇರಿದಂತೆ ಹಲವು ಷರತ್ತುಗಳನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X