ಉಡುಪಿ ಆರ್‌ಟಿಓಯಿಂದ 13.70ಕೋಟಿ ರೂ. ರಾಜಸ್ವ ಸಂಗ್ರಹ
ಉಡುಪಿ, ಅ.5: ಉಡುಪಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 13,70,97,192ರೂ. ರಾಜಸ್ವ ಸಂಗ್ರಹಣೆ ಮಾಡುವ ಮೂಲಕ ಶೇ.108.56 ಸಾಧನೆ ಮಾಡಲಾಗಿದೆ. ಈ ವರ್ಷ ಎಪ್ರಿಲ್‌ನಿಂದ ಸೆಪ್ಟಂಬರ್ ತಿಂಗಳವರೆಗೆ ಒಟ್ಟು 57,03,40,298ರೂ. ರಾಜ್ಯಸ್ವ ಸಂಗ್ರಹಣೆ ಮಾಡಲಾಗಿದೆ.
ವಾಹನಗಳ ತನಿಖೆಯಿಂದ ಮೂರು ವಾಹನಗಳ ಮುಟ್ಟುಗೋಲು ಸಹಿತ ಒಟ್ಟು 206 ವಾಹನಗಳಿಗೆ ತನಿಖಾ ವರದಿ ನೀಡಿ 797900ರೂ. ದಂಡ ವಸೂಲಿ ಹಾಗೂ 1031628ರೂ. ತೆರಿಗೆ ವಸೂಲಿ ಮಾಡಲಾಗಿದೆ. ಒಟ್ಟು 511 ವಾಹನಗಳನ್ನು ಅದ್ಯಾರ್ಪಣ(ಸರೇಂಡರ್) ಮಾಡಲಾಗಿದೆ.
ಉಡುಪಿ ಆರ್‌ಟಿಓನಲ್ಲಿ ಈವರೆಗೆ ನೊಂದಾವಣಿಯಾಗಿ ಚಾಲ್ತಿಯಲ್ಲಿರುವ ವಾಹನಗಳಲ್ಲಿ 358401 ದ್ವಿಚಕ್ರ ವಾಹನಗಳು, 67941 ಕಾರು, 1102 ಬಸ್, 147 ಪ್ರವಾಸಿ ವಾಹನಗಳು, 21954 ಆಟೋ ರಿಕ್ಷಾ, 20473 ಸರಕು ವಾಹನಗಳು, 188 ಅಂಬ್ಯುಲೆನ್ಸ್ ಸಹಿತ ಆಸ್ಪತ್ರೆ ವಾಹನ, 958 ಶಾಲಾ ವಾಹನಗಳಿವೆ. 3740 ಮಂದಿಗೆ ಚಾಲಕರ ಅನುಜ್ಞಾ ಪತ್ರ ನೀಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





