ಸಿರಿಯಾದ 'ಆತ್ಮಹತ್ಯಾ ಬಾಂಬರ್'ನ ವೀಡಿಯೊ ಮುಸ್ಲಿಂ ವಿರೋಧಿ ಧೋರಣೆಯೊಂದಿಗೆ ಭಾರತದಲ್ಲಿ ವೈರಲ್

ಜನರ ಗುಂಪಿನ ನಡುವೆ ಜಟಾಪಟಿ ನಡೆದ ಬಳಿಕ ಹಠಾತ್ ಸ್ಫೋಟವಾಗುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದ ಜೊತೆಗೆ "ಅಶಾಂತಿದೂತನ ಸಂತತಿ" ಎಂದು ಬರೆಯಲಾಗಿದೆ. ‘ಶಾಂತಿದೂತ್’ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಲು ಆನ್ಲೈನ್ನಲ್ಲಿ ಬಳಸಲಾಗುವ ಪದವಾಗಿದೆ. ಇದು ಸಿರಿಯಾದಲ್ಲಿ ನಡೆದ ಘಟನೆಯಾಗಿದ್ದು, ಘಟನೆಯನ್ನು ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು altnews.in ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.
ಸುಜಿತ್ ಸಿಂಗ್ ಗೆಹ್ಲೋಟ್ ಎಂಬ ಬಳಕೆದಾರ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾನೆ. ಇದು 3,000 ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಆಲ್ಟ್ ನ್ಯೂಸ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮುಂದಾಗಿದ್ದು, ವೀಡಿಯೊ ಫ್ರೇಮ್ ಗಳ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿತು. ಇದು ಸೆಪ್ಟೆಂಬರ್ 23 ರ ಅಲ್ತಾಜ್ ನ್ಯೂಸ್ ನ ಲೇಖನದತ್ತ ಕರೆದೊಯ್ದಿದ್ದು, ಲೇಖನವು ವೈರಲ್ ಕ್ಲಿಪ್ ಅನ್ನು ಒಳಗೊಂಡಿತ್ತು. ಸಿರಿಯಾದ ಟಾರ್ಟಸ್ನಲ್ಲಿ ಈ ಘಟನೆ ನಡೆದಿದೆ ಎಂದು ಅದು ಹೇಳಿದೆ.
ಸೆಪ್ಟೆಂಬರ್ 23 ರಂದು ಸ್ಕೈ ನ್ಯೂಸ್ ಅರೇಬಿಯಾ ಮಾಡಿದ್ದ ವರದಿಯ ಪ್ರಕಾರ, ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದಿಂದಾಗಿ ಟಾರ್ಟಸ್ ನ ಜಸ್ಟೀಸ್ ಪ್ಯಾಲೇಸ್ ಗೇಟ್ ಹೊರಗೆ ಬಾಂಬ್ ಸ್ಫೋಟಿಸಿದ್ದಾನೆ. ಗಲಾಟೆಯಲ್ಲಿ ಭಾಗಿಯಾಗಿದ್ದ ಜನರು ವಕೀಲರೊಂದಿಗೆ ವಾಗ್ವಾದ ನಡೆಸಿದ ಗುಂಪಿನಲ್ಲೂ ಇದ್ದರು. ವಕೀಲನ ಸೋದರ ಮಾವ ಬಾಂಬ್ ತಂದಿದ್ದ. ಗಲಾಟೆಯ ಸಮಯದಲ್ಲಿ ಹ್ಯಾಂಡ್ ಗ್ರೆನೇಡ್ ನ ಸುರಕ್ಷಾ ವಾಲ್ವ್ ಅನ್ನು ಅನ್ಲಾಕ್ ಮಾಡಿ ಅದನ್ನು ಬಂದ್ ಮಾಡಿದ್ದ. ಸ್ಫೋಟದಲ್ಲಿ ಆತ ಹಾಗೂ ವಕೀಲ ಇಬ್ಬರೂ ಸಾವನ್ನಪ್ಪಿದ್ದರು. MSN ಅರೇಬಿಯಾ ಕೂಡ ಸ್ಕೈ ನ್ಯೂಸ್ ಅರೇಬಿಯಾ ಲೇಖನವನ್ನು ಮರುಪ್ರಕಟಿಸಿತ್ತು.
ಬಿಬಿಸಿ ಸೆಪ್ಟಂಬರ್ 24ರಂದು ಈ ಘಟನೆಯ ವರದಿ ಮಾಡಿದ್ದು, ಬಾಂಬ್ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು ಎಂದು ಹೇಳಿತ್ತು. ಸಿರಿಯಾದಲ್ಲಿ ಕೌಟುಂಬಿಕ ವಿವಾದದ ನಡುವೆ ವ್ಯಕ್ತಿಯೊಬ್ಬ ಗ್ರೆನೇಡ್ ಅನ್ನು ಸ್ಫೋಟಿಸಿದ್ದ. ಈ ಘಟನೆಯ ವೀಡಿಯೊವನ್ನು ಕೋಮುವಾದಿ ದೃಷ್ಟಿ ಕೋನದಲ್ಲಿ ಭಾರತದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಕೃಪೆ: altnews.in