ಹೂವಿನ ಹಡಗಲಿಯಲ್ಲಿ ಕಲುಷಿತ ನೀರು ಸೇವಿಸಿ 6 ಮಂದಿ ಮೃತ್ಯು: ತನಿಖೆಗೆ ಆದೇಶಿಸಿದ ಸಿಎಂ ಬೊಮ್ಮಾಯಿ

ವಿಜಯನಗರ: ನೂತನ ಜಿಲ್ಲೆ ವಿಜಯನಗರದ ಹೂವಿನ ಹಡಗಲಿ ತಾಲೂಕಿನ ಮರಕಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 6ಮಂದಿ ಮೃತಪಟ್ಟಿದ್ದು, ಪ್ರಕರಣದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ಮೃತರ ಕುಟುಂಬಕ್ಕೆ 3ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಐಎಎಸ್ ಅಧಿಕಾರಿ ಮುನೀಷ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸೂಕ್ತ ತನೆಖೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಕುಡಿಯುವ ನೀರಿಗೆ ಯಾವ ರೀತಿಯಲ್ಲಿ ವಿಷ ಮಿಶ್ರಿಣ ಆಗಿದೆ ಎಂಬ ಬಗ್ಗೆ ವರದಿ ನೀಡಲು ಹೇಳಿದ್ದೇನೆ. ವರದಿ ಕೊಟ್ಟ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.
Next Story





