ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಲು ಸೀತಾಪುರ ತಲುಪಿದ ರಾಹುಲ್ ಗಾಂಧಿ ನೇತೃತ್ವದ ನಿಯೋಗ

photo: The Indian express
ಲಕ್ನೊ: ರಾಹುಲ್ ಗಾಂಧಿ,ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್ ಹಾಗೂ ಚರಣಜಿತ್ ಸಿಂಗ್ ಚನ್ನಿ ಅವರು ಸೀತಾಪುರದ ಪಿಎಸಿ ಕಾಂಪೌಂಡ್ ತಲುಪಿದ್ದಾರೆ. ಉತ್ತರಪ್ರದೇಶ ಸರಕಾರವು ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಸೀತಾಪುರದಲ್ಲಿ ಬಂಧಿಸಿಟ್ಟಿದೆ. ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ಇಲ್ಲಿಂದ ಲಖಿಂಪುರ ಖೇರಿಗೆ ತೆರಳುವ ನಿರೀಕ್ಷೆಯಿದೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್ ಹಾಗೂ ಚನ್ನಿ ಅವರು ರವಿವಾರ ನಡೆದ ಘಟನೆಯಲ್ಲಿ ಸಾವನ್ನಪ್ಪಿದ ರೈತರು ಹಾಗೂ ಪತ್ರಕರ್ತರ ಕುಟುಂಬಗಳಿಗೆ ತಮ್ಮ ಸರಕಾರದಿಂದ ತಲಾ 50 ಲಕ್ಷ ರೂ.ಪರಿಹಾರ ಘೋಷಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಎಲ್ಲಾ ರಾಜಕೀಯ ನಾಯಕರಿಗೆ ಲಖಿಂಪುರ ಖೇರಿಗೆ ಹೋಗಲು ಉತ್ತರ ಪ್ರದೇಶ ಪೊಲೀಸರು ಅನುಮತಿ ನೀಡಿದ್ದಾರೆ. ಆದಾಗ್ಯೂ, ಐದು ಜನ ಮಾತ್ರ ಲಖಿಂಪುರಕ್ಕೆ ಹೋಗಬಹುದು. ಏಕೆಂದರೆ ಸಿಆರ್ಪಿಸಿ ಸೆಕ್ಷನ್ 144 ಇನ್ನೂ ಜಿಲ್ಲೆಯಲ್ಲಿ ಜಾರಿಯಲ್ಲಿದೆ.
Shri @RahulGandhi reaches Sitapur to meet Smt. @priyankagandhi - who has been illegally detained for over 3 days by the UP govt. #IndiaDemandsJustice pic.twitter.com/uT1aYiwDSu
— Congress (@INCIndia) October 6, 2021