ಅ.19ಕ್ಕೆ ವಿಠಲ ಮಲೆಕುಡಿಯ ಪ್ರಕರಣದ ಅಂತಿಮ ತೀರ್ಪು

ಮಂಗಳೂರು, ಅ.6: ನಕ್ಸಲರಿಗೆ ನೆರವು ನೀಡಿದ ಆರೋಪದಲ್ಲಿ ವಿಠಲ ಮಲೆಕುಡಿಯ ಪ್ರಕರಣದಲ್ಲಿ ಎಲ್ಲ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಇದೇ ಅ.19ಕ್ಕೆ ಅಂತಿಮ ತೀರ್ಪನ್ನು ಮಂಗಳೂರು ಮೂರೆನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕಾಯ್ದಿರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಲ್ಲ ವಾದ-ಪ್ರತಿವಾದಗಳು ಮಂಗಳವಾರವೇ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಅ.19ಕ್ಕೆ ನ್ಯಾಯಾಧೀಶರು ಅಂತಿಮ ತೀರ್ಪು ಪ್ರಕಟಿಸುವುದಾಗಿ ಅಭಿಪ್ರಾಯಪಟ್ಟಿದ್ದಾರೆ ಎಂದು ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ತಿಳಿಸಿದ್ದಾರೆ.
Next Story





