ದ.ಕ. ಜಿಲ್ಲೆ : ಕೋವಿಡ್‌ಗೆ ಓರ್ವ ಬಲಿ; 43 ಮಂದಿಗೆ ಕೊರೋನ ಸೋಂಕು

ಮಂಗಳೂರು, ಅ.6: ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಓರ್ವ ಮೃತಪಟ್ಟಿದ್ದು, 43 ಮಂದಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ 83 ಮಂದಿ ಗುಣಮುಖರಾಗಿದ್ದು, ಶೇ. 0.45 ಪಾಸಿಟಿವಿಟಿ ದರ ದಾಖಲಾಗಿದೆ. ಜಿಲ್ಲೆಯ 1,14,707 ಸೋಂಕಿತರ ಪೈಕಿ 1,12,295 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಗೆ ಇಲ್ಲಿಯವರೆಗೆ 1,668 ಮಂದಿ ಮೃತಪಟ್ಟಿದ್ದಾರೆ. 744 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story





