ಡಿವೈಎಫ್ಐ ಮೊಂಟೆಪದವು ಘಟಕದ ಯುವಜನ ಸಮಾವೇಶ
ಮಂಗಳೂರು : 'ಡಿವೈಎಫ್‌ಐ ನಡಿಗೆ ಯುವಜನರ ಕಡೆಗೆ ಯುವಜನರ ನಡಿಗೆ ಉದ್ಯೋಗದ ಕಡೆಗೆ. ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು,ಉದ್ಯೋಗ ಸೃಷ್ಠಿಸಿ,ಸ್ಥಳೀಯರಿಗೆ ಆದ್ಯತೆ ನೀಡಿ' ಎಂಬ ಘೋಷಣೆ ಅಡಿಯಲ್ಲಿ ಮೊಂಟೆಪದವು ಘಟಕದ ಸಮಾವೇಶ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಶಿಕ್ಷಣ ಕೇಂದ್ರಗಳು ನಿರುದ್ಯೋಗಿಗಳನ್ನು ಸೃಷ್ಠಿ ಸುವ ಕಾರ್ಖಾನೆಗಳಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ವಿದ್ಯಾವಂತ ಯುವಕರಿಗೆ ಸರಕಾರ ಉದ್ಯೋಗ ಸೃಷ್ಠಿ ಮಾಡದೆ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಉದ್ಯೋಗ ವಿಲ್ಲದೆ ಹತಶಾರಾಗಿ ಆತ್ಮಹತ್ಯೆದಾರಿ ಹಿಡಿಯುತ್ತಿದ್ದಾರೆ, ಮಾತ್ರವಲ್ಲದೆ ದಾರಿತಪ್ಪುತ್ತಿದ್ದಾರೆ. ಯುವಕರು ದಾರಿ ತಪ್ಪಬಾರದು ಅದಕ್ಕೆ ಪ್ರತಿಯೊಬ್ಬರ ಉದ್ಯೋಗಕ್ಕಾಗಿ ಹೋರಾಟ ಸಂಘಟಿಸ ಬೇಕೆಂದು ಕರೆ ನೀಡಿದರು. ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ 2ಕೋಟಿ ಉದ್ಯೋಗದ ಆಸೆ ತೋರಿಸಿದೆ, ಆದರೆ ಉದ್ಯೋಗದ ಸೃಷ್ಟಿಯ ಬದಲು ಲಕ್ಷಾಂತರ ಯುವಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಉದ್ಯೋಗ ಹಕ್ಕಿಗೆ ಡಿವೈಎಫ್‌ಐ ಸಮರದೀರ ಹೋರಾಟ ನಡೆಸುತ್ತದೆ ಎಂದು ಹೇಳಿದರು.
ದ.ಕ ಜಿಲ್ಲಾ ಉಪಾಧ್ಯಕ್ಷರಾದ ಡಾ. ಜೀವನ್ ರಾಜ್ ಕುತ್ತಾರ್, ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ , ಉಳ್ಳಾಲ ವಲಯ ಮುಖಂಡರಾದ ರಝಾಕ್ ಮೊಂಟೆಪದವು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್‌ಐ ಉಳ್ಳಾಲ ಮುಖಂಡರಾದ ರಝಾಕ್ ಮುಡಿಪು, ಮುಡಿಪು ಘಟಕದ ಅಧ್ಯಕ್ಷರಾದ ಶಾಫಿ ಮುಡಿಪು, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಕಲ್ಮಿಂಜ ಉಪಸ್ಥಿತರಿದ್ದರು.
ಡಿವೈಎಫ್‌ಐ ಮೊಂಟೆಪದವು ಘಟಕ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಶರೀಫ್ ಕೆಎ, ಕಾರ್ಯದರ್ಶಿಯಾಗಿ ಶಾಫಿ ಪಿಎಚ್, ಗೌರವ ಸಲಹೆಗಾರರಾಗಿ ಕರೀಂ ಗುದುರು, ಉಪಾಧ್ಯಕ್ಷರಾಗಿ ರಫೀಕ್ ಮೊಂಟೆಪದವು ಮತ್ತು ಜಲೀಲ್ ಜಳ್ಳು, ಕೋಶಾಧಿಕಾರಿಯಾಗಿ ಹುಸೈನ್ , ಜೊತೆ ಕಾರ್ಯದರ್ಶಿಯಾಗಿ ಮನ್ಸೂರ್ ಮಜಲ್ ಇವರನ್ನು ಆಯ್ಕೆ ಮಾಡಲಾಯಿತು.