ವಿಶ್ವ ಚಾಂಪಿಯನ್ ಶಿಪ್ ಫೈನಲ್ ತಲುಪಿದ ಭಾರತದ ಮೊದಲ ಕುಸ್ತಿತಾರೆ ಅಂಶು ಮಲಿಕ್

photo: twitter
ಓಸ್ಲೊ(ನಾರ್ವೆ): ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೆ ತಲುಪುವ ಮೂಲಕ ಭಾರತದ ಕುಸ್ತಿತಾರೆ ಅಂಶು ಮಲಿಕ್ ಇತಿಹಾಸ ನಿರ್ಮಿಸಿದರು.
ಬುಧವಾರ ನಡೆದ ಸೆಮಿ ಫೈನಲ್ ನಲ್ಲಿ ಜೂನಿಯರ್ ಯುರೋಪಿಯನ್ ಚಾಂಪಿಯನ್ ಸೊಲೊಮಿಯಾ ವಿನಿಕ್ ರನ್ನು ಸೋಲಿಸಿ 19ರ ವಯಸ್ಸಿನ ಅನ್ಶು ಪ್ರಶಸ್ತಿ ಸುತ್ತಿಗೇರಿದ ಭಾರತ ಮೊದಲ ಕುಸ್ತಿಪಟು ಎನಿಸಿಕೊಂಡರು. ಹಾಲಿ ಏಶ್ಯನ್ ಚಾಂಪಿಯನ್ ಅನ್ಶು 57 ಕೆಜಿ ವಿಭಾಗದಲ್ಲಿ ಆರಂಭದಲ್ಲಿ ಮೇಲುಗೈ ಸಾಧಿಸಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಸಾಧಿಸಿ ಇತಿಹಾಸ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿದರು.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕೇವಲ ನಾಲ್ವರು ಮಹಿಳಾ ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ. ಅವರುಗಳೆಂದರೆ-ಗೀತಾ ಫೋಗಟ್(2012), ಬಬಿತಾ ಫೋಗಟ್(2012), ಪೂಜಾ ಧಾಂಡ(2018) ಹಾಗೂ ವಿನೇಶ್ ಫೋಗಟ್(2019.ನಾಲ್ವರು ಕಂಚಿನ ಪದಕವನ್ನು ಜಯಿಸಿದ್ದರು.
ಸುಶೀಲ್ ಕುಮಾರ್(2010) ಹಾಗೂ ಬಜರಂಗ್ ಪುನಿಯಾ(2018) ಬಳಿಕ ವಿಶ್ವ ಚಾಂಪಿಯನ್ ಶಿಪ್ ನ ಚಿನ್ನದ ಪದಕದ ಸುತ್ತಿಗೆ ತೇರ್ಗಡೆಯಾಧ ಭಾರತದ ಮೂರನೇ ಕುಸ್ತಿಪಟು ಅಂಶು. ವಿಶ್ಚ ಚಾಂಪಿಯನ್ ಶಿಪ್ ನಲ್ಲಿ ಭಾರತವು ಈ ತನಕ ಒಂದು ಬಾರಿ ಚಾಂಪಿಯನ್ ಆಗಿತ್ತು. ಸುಶೀಲ್ ಈ ಸಾಧನೆ ಮಾಡಿದ್ದರು. ಅಂಶು ಗುರುವಾರ ಮತ್ತೊಂದು ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದಾರೆ.







