ಐಪಿಎಲ್ :ಸನ್ ರೈಸರ್ಸ್ ವಿರುದ್ದ ಕೊನೆಯ ಹಂತದಲ್ಲಿ ಎಡವಿದ ಆರ್ ಸಿಬಿ

photo: twitter.com/IPL
ಅಬುಧಾಬಿ: ಐಪಿಎಲ್ ಟೂರ್ನಿಯಲ್ಲಿ ಬುಧವಾರ ನಡೆದ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 4 ರನ್ ಗಳಿಂದ ರೋಚಕ ಜಯ ದಾಖಲಿಸಿದೆ.
ಗೆಲ್ಲಲು 142 ರನ್ ಗುರಿ ಪಡೆದಿದ್ದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬೆಂಗಳೂರು ಪರವಾಗಿ ಆರಂಭಿಕ ಬ್ಯಾಟ್ಸ್ ಮನ್ ದೇವದತ್ತ ಪಡಿಕ್ಕಲ್(41, 52 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದ್ದರು. ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್(40) ಒಂದಷ್ಟು ಹೋರಾಡಿ ನೀಡಿದರು. ಮ್ಯಾಕ್ಸ್ ವೆಲ್ 15ನೆ ಓವರ್ ನಲ್ಲಿ ರನೌಟಾಗಿರುವುದು ಆರ್ ಸಿಬಿ ಹಿನ್ನಡೆಗೆ ಕಾರಣವಾಯಿತು.
ಸನ್ ರೈಸರ್ಸ್ ಪರವಾಗಿ ಭುವನೇಶ್ವರ ಕುಮಾರ್, ಜೇಸನ್ ಹೋಲ್ಡರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.
Next Story





