ಬೆಂಗಳೂರಿನ ರಸ್ತೆ ಅಪಘಾತ ಪ್ರಕರಣ; ಮೃತರ ಸಂಖ್ಯೆಯಲ್ಲಿ ಯುವಕರೇ ಹೆಚ್ಚು

ಬೆಂಗಳೂರು, ಅ.6: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ.
ರಸ್ತೆ ಅಪಘಾತ ಸಂಬಂಧ ನಗರದಲ್ಲಿ ಮೃತಪಟ್ಟವರ ಪೈಕಿ 21 ವರ್ಷದಿಂದ 30 ವರ್ಷ ವಯೋಮಾನದ ಯುವಕರೇ ಹೆಚ್ಚಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ, 2020ನೆ ವಾರ್ಷಿಕ ಸಾಲಿನಲ್ಲಿ ಒಟ್ಟು 632 ಮಂದಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದಾರೆ.
ಅದೇರೀತಿ, 2019ನೆ ಸಾಲಿನಲ್ಲಿ 810 ಮಂದಿ, 2018ನೇ ಸಾಲಿನಲ್ಲಿ 846 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ವೇಗವಾಗಿ ವಾಹನ ಚಾಲನೆಯೇ ಮುಖ್ಯ ಕಾರಣವಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





