ರೋಹಿಣಿ ನ್ಯಾಯಾಲಯದಲ್ಲಿ ಶೂಟೌಟ್ ಪ್ರಕರಣ : ಪೊಲೀಸ್ ಕಸ್ಟಡಿಗೆ ಆರೋಪಿ ನವೀನ್ ದಾಸ್
ಹೊಸದಿಲ್ಲಿ, ಅ. 6: ರೋಹಿಣಿ ನ್ಯಾಯಾಲಯದಲ್ಲಿ ಇತ್ತೀಚೆಗೆ ಭೂಗತ ಪಾತಕಿ ಜಿತೇಂದರ್ ಮಾನ್ ಆಲಿಯಾಸ್ ಗೋಗಿಯನ್ನು ಗುಂಡು ಹಾರಿಸಿ ಹತೈಗೈದ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾದ ಆರೋಪದಲ್ಲಿ ನವೀನ್ ದಾಸ್ನನ್ನು ದಿಲ್ಲಿ ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಂಡೋಲಿ ಕಾರಾಗೃಹದಲ್ಲಿರುವ ಇರುವ ದಬಾಸ್ ಅನ್ನು ದಿಲ್ಲಿಯ ಕ್ರೈಮ್ ಬ್ರಾಂಚ್ ಪೊಲೀಸರು ಮಂಗಳವಾರ ಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ನವೀನ್ ದಾಬಾನ ಸೂಚನೆಯಂತೆ ಆತನ ಸಹವರ್ತಿ ನವೀನ್ ಹೂಡಾ ನೇಪಾಳಿ ವ್ಯಕ್ತಿಯೋರ್ವನನ್ನು ಕರೆ ತಂದಿದ್ದ. ನೇಪಾಳಿ ವ್ಯಕ್ತಿ ವಕೀಲನಂತೆ ವೇಷ ಧರಿಸಿ ಶಸ್ತ್ರಾಸ್ತ್ರಗಳೊಂದಿಗೆ ತನ್ನ ಸಹಚರರರಾದ ರಾಹುಲ್ ಹಾಗೂ ಜೈದೀಪ್ನೊಂದಿಗೆ ನ್ಯಾಯಾಲಯಕ್ಕೆ ಹೋಗಿದ್ದ. ಅಲ್ಲಿ ಅವರು ಗೋಗಿಯನ್ನು ಹತ್ಯೆಗೈದಿದ್ದಾರೆ ಎಂದು ದಿಲ್ಲಿ ಪೊಲೀಸ್ನ ಮೂಲಗಳು ತಿಳಿಸಿವೆ.
ಆಳವಾಗಿ ಬೇರೂರಿದ ಪಿತೂರಿಯನ್ನು ಬಹಿರಂಗಗೊಳಿಸಲು ಹಾಗೂ ಆರೋಪಿಗಳಾದ ನವೀನ್ ಹೂಡಾ, ನೇಪಾಳಿಯನ್ನು ಗುರುತಿಸಲು ಹಾಗೂ ಬಂಧಿಸಲು ಆರೋಪಿ ನವೀನ್ ದಾಬಾಸ್ನ ಕಸ್ಟಡಿ ವಿಚಾರಣೆ ಅಗತ್ಯ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





