ಬೆಂಗಳೂರು: ಮೆಟ್ರೋ ಪಿಲ್ಲರ್ ಬಳಿ ಮಣ್ಣು ಕುಸಿತ
ಬೆಂಗಳೂರು, ಅ.6: ಬೆಂಗಳೂರಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮೆಟ್ರೋ ಪಿಲ್ಲರ್ ಸಮೀಪ ಭಾರೀ ಮಣ್ಣು ಕುಸಿತ ಸಂಭವಿಸಿದೆ.
ಮೈಸೂರುರಸ್ತೆ ಜ್ಞಾನಭಾರತಿ ಮೆಟ್ರೋ ನಿಲ್ದಾಣ ಸಮೀಪದ 489 ನೇ ಪಿಲ್ಲರ್ ಸಮೀಪ ಮಣ್ಣು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಪಿಲ್ಲರ್ ಸಮೀಪದಲ್ಲಿ ಮೂರು ಅಡಿ ಮಣ್ಣು ಕುಸಿದಿದೆ. ಸ್ಥಳಕ್ಕೆ ದೌಡಾಯಿಸಿರುವ ಮೆಟ್ರೋ ಅಧಿಕಾರಿಗಳು ಮಣ್ಣು ಕುಸಿತದಿಂದ ಪಿಲ್ಲರ್ ಗೆ ಹಾನಿಯಾಗಬಹುದೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
Next Story





