ಶ್ರೀನಗರ: ಭಯೋತ್ಪಾದಕರ ದಾಳಿಗೆ ಇಬ್ಬರು ಶಿಕ್ಷಕರ ಮೃತ್ಯು

ಹೊಸದಿಲ್ಲಿ: ಶ್ರೀನಗರದ ಸಂಗಮ್ ಈದ್ಗಾ ಪ್ರದೇಶದ ಸರಕಾರಿ ಶಾಲೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
"ಶ್ರೀನಗರ ಜಿಲ್ಲೆಯ ಸಂಗಮ್ ಈದ್ಗಾದಲ್ಲಿ ಬೆಳಿಗ್ಗೆ 11:15 ಕ್ಕೆ ಭಯೋತ್ಪಾದಕರು ಇಬ್ಬರು ಶಾಲಾ ಶಿಕ್ಷಕರನ್ನು ಗುಂಡಿಟ್ಟು ಸಾಯಿಸಿದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ದಾಳಿಕೋರರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅವರು ಹೇಳಿದರು
ಪ್ರತ್ಯೇಕ ಘಟನೆಗಳಲ್ಲಿ ಶ್ರೀನಗರ ಮತ್ತು ಬಂಡೀಪೋರಾದಲ್ಲಿ ಪ್ರಮುಖ ಔಷಧಿಕಾರ ಮಖನ್ ಲಾಲ್ ಬಿಂದ್ರೂ ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆಗೈದ ಮೂರು ದಿನಗಳ ನಂತರ ಈ ಘಟನೆ ನಡೆದಿದೆ.
Next Story