ಐಟಿ ದಾಳಿಯ ಕುರಿತು ಸತ್ಯಾಸತ್ಯತೆ ಗೊತ್ತಾಗಲಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ

ಶಿವಮೊಗ್ಗ (ಅ.7): ಉಮೇಶ್ ನನ್ನ ಆಪ್ತ. ಆತ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ. ದಾಳಿಯ ಕುರಿತು ಸತ್ಯಾಸತ್ಯತೆ ನಾಳೆ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಉಮೇಶ್ ನನ್ನ ಆಪ್ತ. ಆತ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ. ದಾಳಿಯ ಕುರಿತು ಸತ್ಯಾಸತ್ಯತೆ ನಾಳೆ ಗೊತ್ತಾಗಲಿದೆ. ಆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ.
ಯಾರೆ ತಪ್ಪು ಮಾಡಿದರೂ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಕಾನೂನಾತ್ಮಕವಾಗಿ ಆ ಇಲಾಖೆ ಕ್ರಮ ಕೈಗೊಳ್ಳಲಿದೆ.
ದಾಳಿಗೆ ಕಾರಣವೇನು ಅನ್ನುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿಯೆ ಮಾಹಿತಿ ಗೊತ್ತಾಗಿದೆ.
ಇದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಲು ಆಗುವುದಿಲ್ಲ. ಪೂರ್ವ ತಯಾರಿಯೊಂದಿಗೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ಹೇಳಿದ್ದಾರೆ.
Next Story





