ಜ.31ರವರೆಗೆ ಮಂಗಳೂರು-ಮುಂಬೈ ದೈನಂದಿನ ರೈಲು ಸಂಚಾರ ವಿಸ್ತರಣೆ
ಉಡುಪಿ, ಅ.7: ದಕ್ಷಿಣ ರೈಲ್ವೆ, ಕೇಂದ್ರ ರೈಲ್ವೆ ಹಾಗೂ ಪಶ್ಚಿಮ ರೈಲ್ವೆಗಳ ಸಹಯೋಗದೊಂದಿಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಕೆಲವು ಹಬ್ಬದ ವಿಶೇಷ ರೈಲುಗಳ ಪ್ರಯಾಣದ ದಿನಗಳನ್ನು ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ರೈಲು ನಂ.02620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ (ಮುಂಬೈ) ದೈನಂದಿನ ವಿಶೇಷ ರೈಲಿನ ಪ್ರಯಾಣವನ್ನು ನ.8ರಿಂದ 2022ರ ಜ.31ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ನಂ.02619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲಿನ ಪ್ರಯಾಣವನ್ನು ನ.11ರಿಂದ 2022ರ ಫೆ.1ರವರೆಗೆ ವಿಸ್ತರಿಸಲಾಗಿದೆ.
ರೈಲು ನಂ.06072 ತಿರುನಲ್ವೇಲಿ-ದಾದರ್ ನಡುವೆ ಪ್ರತಿ ಬುಧವಾರ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲಿನ ಅವಧಿಯನ್ನು ನ.10ರಿಂದ 2022ರ ಜನವರಿ 26ರವರೆಗೆ ವಿಸ್ತರಿಸಲಾಗಿದೆ. ಹಾಗೆ ರೈಲು ನಂ.06071 ದಾದರ್- ತಿರುನಲ್ವೇಲಿ ನಡುವೆ ಪ್ರತಿ ಗುರುವಾರ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲಿನ ಅವಧಿಯನ್ನು ನ.11ರಿಂದ 2022ರ ಜ.27ರವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ ಎರ್ನಾಕುಲಂ ಜಂಕ್ಷನ್ ಹಾಗೂ ಓಕಾ ನಡುವೆ ಪ್ರತಿ ಶುಕ್ರವಾರ ಮತ್ತು ಬುಧವಾರ ವಾರಕ್ಕೆರಡು ಬಾರಿ ಸಂಚರಿಸುವ ವಿಶೇಷ ರೈಲಿನ ಸಂಚಾರವನ್ನು ನ.10ರಿಂದ 2022ರ ಜ.28ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







