ಬಡವರ ಮನೆ ಬಳಿಯ ರಸ್ತೆಯೂ ಉತ್ತಮವಾಗಿರಲಿ: ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಅ.7: ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ಗುಂಡಿ ಬೀಳದಂತೆ ಕಾಮಗಾರಿ ನಡೆಸಬೇಕು. ಬರೀ ಸಚಿವರ ಮನೆ ಬಳಿ ರಸ್ತೆ ಉತ್ತಮಗೊಂಡರೆ ಸಾಲದು, ಬಡವರ ಮನೆ ಬಳಿಯ ರಸ್ತೆಯೂ ಸರಿಯಾಗಿರಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಕೋರಮಂಗಲದ ವಿಜಯ್ ಮೆನನ್ ಮತ್ತಿತರರು 2017ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಗುಂಡಿ ಮುಚ್ಚುವ ಕಾರ್ಯ ಯಾವುದೇ ಕಾರಣಕ್ಕೂ ತಡವಾಗಬಾರದು. ಗಡುವಿನೊಳಗೆ ಗುಂಡಿಗಳನ್ನು, ಮುಚ್ಚದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ನ್ಯಾಯಪೀಠವು ಎಚ್ಚರಿಸಿತು.
Next Story





