ಅ.8ರಿಂದ ಸಚಿವ ಸುನೀಲ್ ಕುಮಾರ್ ಉಡುಪಿ ಜಿಲ್ಲಾ ಪ್ರವಾಸ

ಉಡುಪಿ, ಅ.7: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್ ಅವರು ಅ.8ರಿಂದ ಮೂರು ದಿನಗಳ ಕಾಲ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅ.8ರ ಶುಕ್ರವಾರ ಬೆಳಗ್ಗೆ 9:30ಕ್ಕೆ ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಬಿವಿಟಿಯಲ್ಲಿ ಸೆಲ್ಕೊ-ಸೋಲಾರ್ ಲ್ಯಾಬ್ ಉದ್ಘಾಟನೆ, 10:15ಕ್ಕೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮಹೋತ್ಸವ ಮತ್ತು ಕೃಷಿ ಡಿಪ್ಲೋಮಾ ಮಹಿಳಾ ವಸತಿ ನಿಲಯ ಉದ್ಘಾಟನೆ, ಅಪರಾಹ್ನ 12ಕ್ಕೆ ಮಲಬಾರ್ ಗೋಲ್ಡ್‌ನಲ್ಲಿ ಸಹಾಯಧನದ ಚೆಕ್ ವಿತರಣೆ, 12:30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ, 2:30ಕ್ಕೆ ಪಡುಬಿದ್ರೆ ಎಂಡ್ ಪಾಯಿಂಟ್ ಕಡಲ ತೀರದ ಬ್ಲ್ಯೂಫ್ಲಾಗ್ ಬೀಚ್‌ನಲ್ಲಿ ಆಝಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮ, 3:30ರಿಂದ 6 ರವರೆಗೆ ಕಾರ್ಕಳದ ವಿಕಾಸ ಜನಸೇವಾ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ. ಕಾರ್ಕಳದಲ್ಲಿ ವಾಸ್ತವ್ಯ.
ಅ.9 ಶನಿವಾರ ಬೆಳಗ್ಗೆ 8:30ಕ್ಕೆ ನಿಟ್ಟೆ ಲೆಮಿನಾ ರಸ್ತೆಗೆ ಗುದ್ದಲಿ ಪೂಜೆ, ಅಪರಾಹ್ನ 12ಕ್ಕೆ ಕಾರ್ಕಳದ ವಿಕಾಸ ಜನಸೇವಾ ಕಛೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ, 3:00ಕ್ಕೆ ಕಾಂತಾವರ ಕನ್ನಡ ಸಂಘ ಕಾರ್ಯಕ್ರಮ, ಸಂಜೆ 6:30ಕ್ಕೆ ಖಾಸಗಿ ಕಾರ್ಯಕ್ರಮ ಬಳಿಕ ಕಾರ್ಕಳದಲ್ಲಿ ವಾಸ್ತವ್ಯ.
ಅ.10ರ ರವಿವಾರ ಬೆಳಗ್ಗೆ 8:00ಕ್ಕೆ ಅಜೆಕಾರಿನ ದೆಪ್ಪುತ್ತೆಯಲ್ಲಿ ವಿದ್ಯುತ್ ಪರಿವರ್ತಕ ಕಾಮಗಾರಿಗಳಿಗೆ ಗುದ್ದಲಿ ಪೂಜೆ, 9 ಕ್ಕೆ ಕಾರ್ಕಳ ಪುಲ್ಕೇರಿಯಲ್ಲಿ ಉಚಿತ ಔಷಧಿ ವಿತರಣೆ, 10:30ಕ್ಕೆ ಕಟಪಾಡಿ ವ್ಯವಸಾಯ ಸೇವಾ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ, 11:30ಕ್ಕೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಜನಪ್ರತಿ ನಿಧಿಗಳಿಗೆ ಅಭಿನಂದನೆ, ಅಪರಾಹ್ನ 12:15ಕ್ಕೆ ಕಾಪು ಮಾರಿಗುಡಿಗೆ ಭೇಟಿ, 1 ಕ್ಕೆ ಉಡುಪಿ ಪೆರ್ಣಂಕಿಲ ಶಂಕರ ಪ್ರತಿಷ್ಠಾನ ಉದ್ಘಾಟನೆ, 3 ಕ್ಕೆ ಕಾರ್ಕಳದ ರೈಸ್ ಮಿಲ್‌ನಲ್ಲಿ ಸುಧಾರಿತ ಕಾರ್ಲಕಜೆ ಭತ್ತದ ಬೆಳೆಯ ಕುರಿತಂತೆ 2021ರ ಬೆಳೆ ಕ್ಷೇತ್ರೋತ್ಸವ, ಸಂಜೆ 7:00ಕ್ಕೆ ಕಾರ್ಕಳದಿಂದ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.







