"ಎಲ್ಲವೂ ಮಮತಾ ಬ್ಯಾನರ್ಜಿ ಅನುಗ್ರಹ" ಎಂದು ಮರಳಿ ಟಿಎಂಸಿಗೆ ಸೇರ್ಪಡೆಯಾದ ಸಬ್ಯಸಾಚಿ ದತ್ತಾ

ಫೋಟೊ: ANI
ಕೋಲ್ಕತಾ, ಅ. 7: ಕಳೆದ ವರ್ಷ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಸಬ್ಯಸಾಚಿ ದತ್ತಾ ಅವರು ಟಿಎಂಸಿಗೆ ಮರಳಿದ್ದಾರೆ. ಸಬ್ಯಸಾಚಿ ದತ್ತಾ ಅವರು ಗುರುವಾರ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು. ಅನಂತರ ಸಬ್ಯಸಾಚಿ ದತ್ತಾ ಅವರನ್ನು ಪಾರ್ಥಾ ಚಟರ್ಜಿ ಹಾಗೂ ಪಿರ್ಹಾದ್ ಹಕೀಮ್ ಅವರು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
‘‘ನಾನೇನಾಗಿದ್ದೇನೋ, ನಾನು ಏನು ಸ್ವೀಕರಿಸಿದ್ದೇನೋ , ಅದೆಲ್ಲವೂ ಮಮತಾ ಬ್ಯಾನರ್ಜಿ ಅವರ ಅನುಗ್ರಹ. ಪಕ್ಷದಲ್ಲಿ ಇರುವಾಗ ಕೆಲವು ತಪ್ಪು ತಿಳಿವಳಿಕೆ ಉಂಟಾಗಿತ್ತು. ಅದು ನಾನು ಪಕ್ಷ ತ್ಯಜಿಸಲು ಕಾರಣವಾಯಿತು’’ ಎಂದು ಅವರು ಹೇಳಿದ್ದಾರೆ.
Next Story