ರೈತರ ವಿರುದ್ಧ ʼಕೋಲುಗಳನ್ನು ಎತ್ತಿಕೊಳ್ಳಲುʼ ಹೇಳಿದ್ದ ಹರ್ಯಾಣ ಸಿಎಂ ಖಟ್ಟರ್ ರಿಂದ ಕ್ಷಮೆಯಾಚನೆ

Photo: Twitter
ಕೈತಾಲ್: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ʼಕೋಲುಗಳನ್ನು ಎತ್ತಿಕೊಳ್ಳಲುʼ ಮತ್ತು ʼಮುಯ್ಯಿಗೆ ಮುಯ್ಯಿ ತೀರಿಸಲುʼ ಕರೆ ನೀಡಿ ವಿವಾದಕ್ಕೀಡಾಗಿದ್ದ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ್ದಾರೆ.
"ನೀವು ಒಂದು ತಿಂಗಳು, ಎರಡು ತಿಂಗಳು, ಆರು ತಿಂಗಳು ಜೈಲಿನಲ್ಲಿ ಕಳೆದರೂ ಪರವಾಗಿಲ್ಲ, ಬಳಿಕ ನೀವು ನಾಯಕರಾಗಿ ಹೊರಹೊಮ್ಮುತ್ತೀರಿ" ಎಂದು ಖಟ್ಟರ್ ಹೇಳಿದ್ದು ವ್ಯಾಪಕ ವಿವಾದಕ್ಕೀಡಾಗಿತ್ತು.
ಪಂಚಕುಲದ ಮಾತಾ ಮಾನಸಾದೇವಿ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಮನೋಹರ್ ಲಾಲ್ ಖಟ್ಟರ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು. "ನನ್ನ ಹೇಳಿಕೆಯಿಂದ ಯಾವುದಾರೂ ರೈತ ಸಹೋದರರಿಗೆ ನೋವಾಗಿದ್ದರೆ ನಾನು ಅದನ್ನು ಹಿಂಪಡೆಯುತ್ತೇನೆ. ಹರ್ಯಾಣದಲ್ಲಿ ಯಾವುದೇ ರೀತಿಯ ಕಾನೂನು ಭಂಗ ಪರಿಸ್ಥಿತಿ ನಿರ್ಮಾಣವಾಗುವುದನ್ನು ನಾನು ಬಯಸುವುದಿಲ್ಲ" ಎಂದು ಅವರು ಹೇಳಿದರು.
Next Story





