ಮಂಗಳೂರು : ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು : ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಬಿ.ಎಂ. ಫಾರೂಕ್ ಅವರ ಸಮ್ಮುಖದಲ್ಲಿ ಹಾಗೂ ಯುವ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಝಲ್ ರಹ್ಮಾನ್ ಅವರ ನೇತೃತ್ವದಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ರಾಶ್ ಬ್ಯಾರಿ, ಯುವ ವಕೀಲ ಸುಮಿತ್ ಸುವರ್ಣ, ಶಫೀಕ್ ಉಳ್ಳಾಲ, ಹಾರಿಸ್, ಅಬ್ದುಲ್ ಮಜೀದ್, ವಿದ್ಯಾರ್ಥಿ ಘಟಕದ ಮುಹಮ್ಮದ್ ಬಿಲಾಲ್, ಮುಹಮ್ಮದ್ ಅರ್ಫಾಝ್, ಶಂಶೀರ್, ಸಮೀರ್, ಅಶ್ರಫ್, ವಿನ್ಸಂಟ್ ಹಾಗು ಇತರರು ಜೆಡಿಎಸ್ ಪಕ್ಷಕ್ಕೆ ಇಂದು ಸೇರ್ಪಡೆಯಾದರು.
ಈ ಸಂದರ್ಭ ಜೆಡಿಎಸ್ ಮುಖಂಡರಾದ ವಸಂತ ಪೂಜಾರಿ, ಮುನೀರ್ ಮುಕ್ಕಚ್ಚೇರಿ, ಸುಮತಿ ಹೆಗ್ಡೆ, ಎನ್.ಪಿ. ಪುಷ್ಪರಾಜನ್, ಲತೀಫ್ ವಳಚ್ಚಿಲ್, ನಾಸಿರ್ ಯಾದ್ಗರ್, ನಾಗೇಶ್, ರತ್ನಾಕರ್ ಸುವರ್ಣ, ಸವಾಝ್ ಬಂಟ್ವಾಳ, ನಝೀರ್ ಖಂದಕ್, ಮುಹಮ್ಮದ್ ಅಲ್ತಾಫ್ ಸಹಿತ ಹಲವಾರು ನಾಯಕರು ಉಪಸ್ಥಿತರಿದ್ದರು.

Next Story







