ಮಂಗಳೂರು: 'ಏಷ್ಯಾ ವೆಡ್ಡಿಂಗ್ ಫೇರ್-2021' ಪ್ರದರ್ಶನ ಆರಂಭ
ಚಿನ್ನಾಭರಣಗಳ ಸಹಿತ ಮದುವೆ ಉಡುಪುಗಳ ಸಂಗ್ರಹಕ್ಕೆ ಉತ್ತಮ ಸ್ಪಂದನೆ

ಮಂಗಳೂರು, ಅ.8: ದಕ್ಷಿಣ ಭಾರತದ ಅತ್ಯಂತ ಮನಮೋಹಕ ಮದುವೆ ಮತ್ತು ಆಭರಣಗಳ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿರುವ 'ಏಷ್ಯಾ ವೆಡ್ಡಿಂಗ್ ಫೇರ್' ನಗರದ ಎಂ.ಜಿ. ರಸ್ತೆಯ ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಇಂದು ಆರಂಭಗೊಂಡಿತು.
ಖ್ಯಾತ ವಸ್ತ್ರ ವಿನ್ಯಾಸಕಾರರಾದ ಜಯಂತಿ ಬಳ್ಳಾಲ್ ಏಷ್ಯಾ ವೆಡ್ಡಿಂಗ್ ಫೇರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕುಡ್ಲ ಸಿಟಿಗೆ ಈಗ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ದಸರಾ, ದೀಪಾವಳಿಯ ಜತೆಗೆ ಮದುವೆಯ ಸೀಸನ್ ಬರುತ್ತಿರುವುದರಿಂದ ಏಷ್ಯಾ ವೆಡ್ಡಿಂಗ್ ಫೇರ್ ನಲ್ಲಿ ವಧುವಿನ ಆಭರಣಗಳಿಂದ ಹಿಡಿದು ಉಡುಪು ಸೇರಿದಂತೆ ಎಲ್ಲಾ ಅಗತ್ಯಗಳು ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.
ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಉತ್ಸವ ಎಂಬ ಖ್ಯಾತಿ ಪಡೆದಿರುವ ಈ ವೆಡ್ಡಿಂಗ್ ಫೇರ್ ನಲ್ಲಿ ಆಭರಣ ವಿಭಾಗದಲ್ಲಿ ಅತ್ಯಂತ ವಿಶಿಷ್ಟವಾದ ವಿನ್ಯಾಸಗಳ ಮದುಮಗಳ ಆಭರಣಗಳು ಪ್ರದರ್ಶನದಲ್ಲಿದೆ. ಆರಂಭದ ದಿನವೇ ಉತ್ತಮ ಸ್ಪಂದನೆ ದೊರಕಿದೆ.
ಕೌಚರ್, ಸಾಂಪ್ರದಾಯಿಕ ಆಭರಣಗಳು, ಮದುಮಗಳ ಬಟ್ಟೆಗಳು, ಕಾಂಚೀಪುರಂ ವೆಡ್ಡಿಂಗ್ ಸೀರೆಗಳು, ಬನಾರಸ್ ವೆಡ್ಡಿಂಗ್ ಸೀರೆಗಳು, ಅಮೂಲ್ಯ ಹರಳುಗಳ ಮತ್ತು ಮುತ್ತಿನ ಆಭರಣಗಳು, ವೆಡ್ಡಿಂಗ್ ಪರಿಕರಗಳು, ವೆಡ್ಡಿಂಗ್ ಫೋಟೋಗ್ರಾಫರ್, ವೆಡ್ಡಿಂಗ್ ಗಿಫ್ಟ್ ಸೇರಿದಂತೆ ಒಂದು ಮದುವೆ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ಸೊತ್ತುಗಳು ಈ ಪ್ರದರ್ಶನದಲ್ಲಿ ಗ್ರಾಹಕರಿಗೆ ಸಿಗಲಿದೆ.
ಮೇಳದಲ್ಲಿ ಬೆಂಗಳೂರಿನ ಶ್ರೀ ಗಣೇಶ್ ವಜ್ರಗಳು ಮತ್ತು ಆಭರಣಗಳು, ಬೆಂಗಳೂರಿನ ಗಜ್ರಾಜ್ ಜ್ಯುವೆಲ್ಲರ್ಸ್, ಬೆಂಗಳೂರಿನ ಸಿಂಹ ಜ್ಯುವೆಲ್ಲರ್ಸ್, ಬೆಂಗಳೂರಿನ ಸಮ್ಯಕ್, ವಿಸ್ತಾರ್ ಸೀರೆಗಳು, ಜೈಪುರದ ಟಿಸ್ಟಾಬೆನ್ ರೆಡ್ ಕಾರ್ಪೆಟ್‌ಗಳು, ಮುಂಬೈಯ ಇಸ್ರಾನಿ ಛಾಯಾಗ್ರಹಣ, ನಾರಿ, ಸ್ಟೈಲ್ ಔರಾ, ಗಾಸಿಪ್, ಅಸುಟುರಿ, ಕೊಕೊ ಲಗ್ಸುರಿ ಇಂಟರ್ ನ್ಯಾಶನಲ್, ಸೇಫ್ಟಿ ಪಿನ್ ಸೀರೆಗಳು, ಪಿಕೆ ಕಲೆಕ್ಷನ್ಸ್, ಮುದ್ರಾಕ್ ಹಾಗೂ ಇನ್ನಿತರ ಬ್ರ್ಯಾಂಡ್‌ಗಳ ಅಪಾರ ಸಂಗ್ರಹ ಈ ಮೇಳದಲ್ಲಿದ್ದು, ಅ.10ರವರೆಗೆ ಮುಂದುವರಿಯಲಿದೆ. ಬೆಳಗ್ಗೆ 10.30ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನಕ್ಕೆ ಭೇಟಿ ನೀಡಬಹುದಾಗಿದೆ.
''ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಧುವಿಗೆ ಬೇಕಾದ ಎಲ್ಲಾ ವಸ್ತುಗಳು ಸಿಗಲಿದೆ. ಕೋವಿಡ್ ಬಳಿಕ ಈಗ ಮದುವೆ ಸೀಸನ್‌ಗಳು ಬರಲಿದ್ದು ಸಾರ್ವಜನಿಕರು ಸದುಪಯೋಗ ಪಡೆಯಬಹುದು''
- ಹರೀಶ್ ಸಚ್‌ದೇವ್, ಎಚ್ ಆರ್‌ಎಸ್ ಮಿಡಿಯಾ, ಮೇಳದ ಸಂಯೋಜಕರು.












