ಚುನಾವಣಾ ಪೂರ್ವ ಸಮೀಕ್ಷೆ ನಿಷೇಧಿಸಲು ಚುನಾವಣಾ ಆಯೋಗಕ್ಕೆ ಮಾಯಾವತಿ ಮನವಿ

ಲಕ್ನೋ: ಮಾಧ್ಯಮ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳ ಸಮೀಕ್ಷೆಗಳನ್ನು ಯಾವುದೇ ಚುನಾವಣೆಗೆ ಆರು ತಿಂಗಳ ಮೊದಲು ನಿಷೇಧಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಶನಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆಯು ವುದಾಗಿ ಹೇಳಿದರು.
ಕಾನ್ಶಿರಾಮ್ ಸ್ಮಾರಕ ಸ್ಥಳದಲ್ಲಿ ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ 15 ನೇ ಪುಣ್ಯತಿಥಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ದಿವಂಗತ ದಲಿತ ನಾಯಕನಿಗೆ 'ಭಾರತ ರತ್ನ' ನೀಡಬೇಕೆಂದು ಒತ್ತಾಯಿಸಿದರು ಹಾಗೂ ಉತ್ತರ ಪ್ರದೇಶದಲ್ಲಿ ಜನರು ಆಡಳಿತವನ್ನು ಬದಲಿಸುವ ಬಗ್ಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
"ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ವ್ಯಾಪಾರ ಸಂಸ್ಥೆಗಳ ಸಮೀಕ್ಷೆಗಳು, ಮಾಧ್ಯಮ ಸಂಸ್ಥೆಗಳು ಮತ್ತು ಇತರ ಏಜೆನ್ಸಿಗಳು ಸಮೀಕ್ಷೆ ನಡೆಸುವುದನ್ನು ನಿಷೇಧಿಸಬೇಕು. ಇದರಿಂದ ನಿರ್ದಿಷ್ಟ ರಾಜ್ಯದಲ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರುವುದಿಲ್ಲ" ಎಂದು ಅವರು ಹೇಳಿದರು.
Next Story