ಈ ತಿಂಗಳಾಂತ್ಯಕ್ಕೆ ರಾಜ್ಯದ ಮೊದಲ ದೂರದರ್ಶನ ಕೇಂದ್ರ ಬಂದ್
ಕಲಬುರ್ಗಿ: ರಾಜ್ಯದ ಮೊದಲ ಹಾಗೂ 44 ವರ್ಷಗಳ ಸುದೀರ್ಘ ಕಾರ್ಯನಿರ್ವಹಿಸಿದ ದೂರದರ್ಶನದ ಕಲಬುರ್ಗಿ ಕೇಂದ್ರವನ್ನು ಅ.31ರಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ ಎಂದು ದೂರದರ್ಶನ ಮಹಾ ನಿರ್ದೇಶನಾಲಯ ತಿಳಿಸಿದೆ.
1977ರ ಸೆ.3ರಂದು ಕಲಬುರ್ಗಿಯಲ್ಲಿ ಈ ದೂರದರ್ಶನ ಕೇಂದ್ರವನ್ನು ಆರಂಭಿಸಲಾಗಿತ್ತು. ರಾಜ್ಯದಲ್ಲಿ ತೆರೆದ ಮೊದಲ ಕೇಂದ್ರ ಎಂಬ ಹೆಗ್ಗಳಿಕೆಯೂ ಇದರದ್ದು. 44 ವರ್ಷಗಳ ಸುದೀರ್ಘ ಕಾರ್ಯನಿರ್ವಹಿಸಿದ ನಂತರ ಕೇಂದ್ರ ಸರಕಾರ ಇದನ್ನು ಬಂದ್ ಮಾಡಿದೆ.
ದೇಶದ 152 ಆಕಾಶವಾಣಿ ಮತ್ತು ದೂರದರ್ಶನ ಕೆಂದ್ರಗಳನ್ನು ಅ.31ರೊಳಗೆ ಮುಚ್ಚುವಂತೆ ಪ್ರಸಾರ ಭಾರತಿಯ ಆರ್.ಎನ್.ಮೀನಾ ಆದೇಶಿಸಿದ್ದರು. ಇದರಲ್ಲಿ ಕಲಬುರಗಿ ಕೇಂದ್ರವೂ ಸೇರಿದ್ದರಿಂದ ಜಿಲ್ಲೆಯ ಜನ ಪ್ರತಿರೋಧ ತೋರಿದ್ದರು.
Next Story





