ಅ.10ರಿಂದ ವಸ್ತು ಪ್ರದರ್ಶನ-ಮಾರಾಟ ಮೇಳ
ಮಂಗಳೂರು, ಅ.9: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಕೈಗಾರಿಕಾ ವಸಾಹತು ಯೆಯ್ಯಡಿ ಇದರ ಮಹಿಳಾ ವಿಭಾಗ ಮತ್ತು ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಇವರ ಸಹಯೋಗದೊಂದಿಗೆ ಅ.10ರಿಂದ 15ರವರೆಗೆ ಮಂಗಳಾದೇವಿ ದೇವಸ್ಥಾನದ ಬಳಿಯ ಕಾಂತಿ ಚರ್ಚ್ ಹಾಲಿನಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
ಅ.10ರಂದು ಪೂ. 11ಕ್ಕೆ ಶಾಸಕ ವೇದವ್ಯಾಸ ಕಾಮತ್ ಮೇಳ ಉದ್ಘಾಟಿಸಲಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





