Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ರಂಗದೊಳಗಿಂದ
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಮನೆಯ ಬಾವಿ ಅಂದಾನಿ ಕಂಪೆನಿಗೆ ಹರಾಜು!

ಮನೆಯ ಬಾವಿ ಅಂದಾನಿ ಕಂಪೆನಿಗೆ ಹರಾಜು!

ಚೇಳಯ್ಯಚೇಳಯ್ಯ9 Oct 2021 6:39 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮನೆಯ ಬಾವಿ ಅಂದಾನಿ ಕಂಪೆನಿಗೆ ಹರಾಜು!

ಪತ್ರಕರ್ತ ಎಂಜಲು ಕಾಸಿ ಎಂದಿನಂತೆ ಜೋಳಿಗೆಯ ಜೊತೆಗೆ ಕಚೇರಿ ಕಡೆಗೆ ಹೊರಡುವ ಬಸ್ಸಿಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ, ಯಾರೋ ಬಂದು ದುರುಗುಟ್ಟಿ ನೋಡತೊಡಗಿದರು. ಕಾಸಿಗೆ ಒಳಗೊಳಗೆ ನಡುಕ. ಆದರೂ ಧೈರ್ಯ ತಂದು ಕುತ್ತಿಗೆಯಲ್ಲಿರುವ ಪತ್ರಕರ್ತನ ಐಡಿ ಕಾರ್ಡ್‌ನ್ನು ಅಲ್ಲಾಡಿಸತೊಡಗಿದು. ‘‘ಏನು ಇಲ್ಲಿ....’’ ಆಗಂತುಕ ಕೇಳಿದ.

ಕಾಸಿಗೆ ಸಿಟ್ಟು ಬಂತು. ಬಸ್‌ಸ್ಟಾಂಡ್ ಇವನ ಅಪ್ಪನ ಸೊತ್ತ? ‘‘ಸಾರ್ವಜನಿಕ ಬಸ್ ತಂಗುದಾಣದಲ್ಲಿ ನಿಂತಿದ್ದೇನೆ....ನೀವ್ಯಾರು ಕೇಳುವುದಕ್ಕೆ....’’

‘‘ಯಾಕೆಂದರೆ ... ಇದನ್ನು ಚೌಕೀದಾರರು ನಮಗೆ ಮಾರಿದ್ದಾರೆ. ಇದೀಗ ನಮ್ಮ ಸೊತ್ತು’’ ಆಗಂತುಕ ಟೈ ಸರಿಪಡಿಸಿಕೊಳ್ಳುತ್ತಾ ಹೇಳಿದ. ‘‘ಅರೆ! ಇದು ನಗರ ಪಂಚಾಯತ್ ಕಟ್ಟಿಸಿದ ತಂಗುದಾಣ....ಅದನ್ನೂ ಮಾರಿ ಬಿಟ್ರಾ...ಎಷ್ಟಕ್ಕೆ ಕೊಂಡುಕೊಂಡ್ರಿ....’’
‘‘ಒಂದು ಸಾವಿರ ರೂಪಾಯಿ ಕೊಡ್ತೀವಿ....ಎಂದು ಹೇಳಿದೆವು. ಒಂದೈನೂರು ಜಾಸ್ತಿ ಕೊಡಿ ಎಂದು ಚೌಕಾಶಿ ಮಾಡಿದರು. ಕೊಟ್ಟೆವು. ಇವತ್ತಿನಿಂದ ಬಸ್‌ಸ್ಟಾಂಡ್ ನಮ್ಮದು. ಕೌಂಟರ್‌ನಲ್ಲಿ ಟಿಕೆಟ್ ಪಡೆದು ಬಸ್‌ಸ್ಟಾಂಡ್‌ನಲ್ಲಿ ಕುಳಿತು ಕೊಳ್ಳಬೇಕು....’’
‘‘ಎಷ್ಟು ಟಿಕೆಟ್‌ಗೆ?’’ ಕಾಸಿ ಆತಂಕದಿಂದ ಕೇಳಿದ.
‘‘ಒಂದೂವರೆ ಸಾವಿರ ರೂಪಾಯಿ ಕೊಟ್ಟು ಪಾಸ್ ಮಾಡಿಸಿಕೊಂಡರೆ ಇಡೀ ವರ್ಷ ನೀವು ಬಸ್ ಸ್ಟಾಪ್‌ನಲ್ಲಿ ಫ್ರೀಯಾಗಿ ಬಸ್‌ಗಾಗಿ ಕಾಯಬಹುದು....’’
ಬೆಚ್ಚಿದ ಕಾಸಿ ಇಲ್ಲಿ ನಿಲ್ಲುವುದಕ್ಕಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಸರಿ ಎಂದವನು ಹೆದ್ದಾರಿಯುದ್ದಕ್ಕೂ ನಡೆಯತೊಡಗಿದ. ತುಸು ದೂರ ಹೋದದ್ದೇ...ಒಬ್ಬ ಸೂಟು ಧಾರಿ ಅಡ್ಡ ನಿಂತ. ‘‘ಎಲ್ಲಿಗೆ? ಟಿಕೆಟ್ ತೋರ್ಸಿ....’’
‘‘ಎಂತದಕ್ಕೆ ಟಿಕೆಟ್?’’ ಕಾಸಿ ಬೆಚ್ಚಿ ಕೇಳಿದ.
‘‘ನೀವು ನಡೆಯುತ್ತಿದ್ದೀರಲ್ಲ....ರಸ್ತೆ....ಅದನ್ನು ನಿನ್ನೆ ಹರಾಜಿನಲ್ಲಿ ನಾವು ಕೊಂಡು ಕೊಂಡಿದ್ದೇವೆ. ರಸ್ತೆಯಲ್ಲಿ ನಡೆಯಬೇಕಾದರೆ ಟಿಕೆಟ್ ತೆಗೆದುಕೊಂಡೇ ನಡೆಯಬೇಕು....’’

‘‘ನಡೆಯುವುದಕ್ಕೂ ದುಡ್ಡಾ?’’ ಕಾಸಿ ಕಂಗಾಲಾಗಿ ಕೇಳಿದ. ‘‘ಮತ್ತೆ...ಇದು ನಿಮ್ಮಪ್ಪನ ರಸ್ತೆಯಾ...ಆ ಬಸ್ ಸ್ಟಾಪ್‌ನಿಂದ ಮುಂದಿನ ಬಸ್‌ಸ್ಟಾಪ್‌ನವರೆಗಿನ ರಸ್ತೆಯನ್ನು ನಾನು ಹರಾಜು ಕೂಗಿದ್ದೇನೆ. ಚೌಕೀದಾರರ ಮೇಲೆ ಅಪಾರ ಗೌರವ ಇರುವುದರಿಂದ 5,000 ರೂಪಾಯಿಗೆ ಒಂದು ರೂಪಾಯಿ ಜಾಸ್ತಿ ಕೊಟ್ಟು ಕೊಂಡುಕೊಂಡಿದ್ದೇನೆ....’’ ಸೂಟ್‌ಧಾರಿ ಮೀಸೆ ತಿರುಗಿಸಿದ.
ಕಾಸಿ ಹೆದರುತ್ತಾ ರಸ್ತೆ ಪಕ್ಕದಲ್ಲಿ ಸಾಗುವ ಕಾಲು ದಾರಿಯನ್ನು ನಡೆಯುವುದಕ್ಕೆ ಆರಿಸಿಕೊಂಡ. ಕಾಲು ದಾರಿಯಲ್ಲಿ ಮುಂದೆ ಸಾಗುತ್ತಿದ್ದಂತೆಯೇ ಸಣ್ಣದೊಂದು ತೋಡು ಕಂಡಿತು. ಅಲ್ಲಿನ ನೀರಿನಲ್ಲಿ ಮುಖ ತೊಳೆಯತೊಡಗಿದಂತೆಯೇ ‘‘ಏಯ್ ಯಾರದು?’’ ಎಂಬ ಕೂಗು.
 


‘‘ಆ ತೋಡನ್ನು ಈಗಾಗಲೇ ನಾನು ಕೊಂಡುಕೊಂಡಿದ್ದೇನೆ. ಹತ್ತು ಸಾವಿರ ರೂಪಾಯಿಗೆ ತೋಡನ್ನು ಚೌಕೀದಾರರು ಮಾರಿದ್ದಾರೆ. ಅದರ ನೀರನ್ನು ಮುಟ್ಟುವಂತಿಲ್ಲ. ಮುಂದಿನ ಒಂದು ಕಿಲೋಮೀಟರ್‌ವರೆಗೆ ಹರಿಯುವ ತೋಡು ನನ್ನದು. ಅದರ ಬಳಿಕದ್ದು ಬೇರೆಯವರು ಕೊಂಡಿದ್ದಾರೆ. ಈ ನೀರನ್ನು ಬಳಸಬೇಕಾದರೆ ಟಿಕೆಟ್ ಇದೆ...’’ ಕಾಸಿ ತಿರುಗಿ ನೋಡದೆ ಅಲ್ಲಿಂದ ಓಡಿದ. ನೋಡಿದರೆ ಪಕ್ಕದಲ್ಲೇ ನದಿ. ನದಿಯನ್ನು ಕಾಯುವುದಕ್ಕೆ ಒಬ್ಬ ಕಾವಲುಗಾರ. ಅವನ ಪಕ್ಕದಲ್ಲೇ ‘ಅಂದಾನಿ ಕಂಪೆನಿ ನದಿ’ ಎಂಬ ಬೋರ್ಡ್. ಓಹ್, ನದಿಯೂ ಮಾರಾಟವಾಗಿದೆ ಎಂದು ಗೊತ್ತಾಯಿತು. ಕೌಂಟರ್‌ನಲ್ಲಿ ನದಿ ನೋಡುವುದಕ್ಕೆ ಬಂದವರು ಟಿಕೆಟ್‌ಗಾಗಿ ಸಾಲು ನಿಂತಿದ್ದರು. ನೇರವಾಗಿ ಕಾವಲುಗಾರನ ಬಳಿ ಸಾಗಿ ಕೇಳಿದ ‘‘ಸಾರ್...ಹಾಗಾದರೆ ಮಂಗಳೂರಿನ ಕಡಲನ್ನು ಕೂಡ ಚೌಕೀದಾರರು ಮಾರಿದರಾ?’’
 ‘‘ಕಡಲನ್ನು ಅಂಬಾನಿ ಸಾಹೇಬರಿಗೆ, ಕಡಲೊಳಗಿರುವ ಒಟ್ಟು ಮೀನನ್ನು ಅಂದಾನಿ ಸಾಹೇಬರಿಗೆ ಮಾರಲಾಗಿದೆ. ಇನ್ನು ಕಡಲಿನ ಮೀನು ಹಿಡಿಯುವ ಎಲ್ಲ ಅಧಿಕಾರ ಅಂದಾನಿ ಕಂಪೆನಿಗಷ್ಟೇ ಇದೆ. ಕಡಲಿನಲ್ಲಿ ಯಾವುದೇ ಹಡಗು ಹೋಗಬೇಕಾದರೆ ಅಂಬಾನಿ ಸಾಹೇಬರ ಅನುಮತಿ ಕೇಳಬೇಕು....’’ ಕಾವಲು ಗಾರ ವಿವರಿಸಿದ.

ಕಾಸಿ ಅಲ್ಲಿಂದ ಓಡಿದವನೇ ‘‘ಉಸ್ಸಪ್ಪ...’’ ಎಂದು ಮರದ ನೆರಳಿನಲ್ಲಿ ನಿಂತ. ‘ಟಿಕೆಟ್...’’ ಯಾರೋ ಕೂಗಿದಂತಾಯಿತು. ಒಬ್ಬ ಸೂಟ್‌ಧಾರಿ ಟಿಕೆಟ್ ಹಿಡಿದು ನಿಂತಿದ್ದ ‘‘ಈ ಮರವನ್ನು ಚೌಕೀದಾರರು ಈಗಾಗಲೇ 300 ರೂಪಾಯಿಗೆ ಮಾರಿದ್ದಾರೆ. ನೀವು ಒಂದು ಗಂಟೆ ಮರದ ನೆರಳಲ್ಲಿ ತಂಗಬೇಕಾದರೆ 200 ರೂಪಾಯಿಯ ಟಿಕೆಟ್ ತೆಗೆಯಬೇಕು....’’
 ಇನ್ನು ಉಳಿಗಾಲವಿಲ್ಲ ಎಂದವನೇ ಕಾಸಿ ಮನೆಯ ಕಡೆಗೆ ಧಾವಿಸಿದ. ಅಲ್ಲಿ ನೋಡಿದರೆ ಹೆಂಡತಿ ಸೂಸಿ ಮನೆಯ ಹೊರಗಡೆ ನಿಂತಿದ್ದಾಳೆ. ‘‘ರೀ...ಚೌಕೀದಾರರು ನಮ್ಮ ಅನುಮತಿಯಿಲ್ಲದೆ ನಮ್ಮ ಮನೆಯ ಬಾವಿಯನ್ನು ಅಂದಾನಿ ಕಂಪೆನಿಗೆ ಮಾರಿ ಬಿಟ್ಟಿದ್ದಾರೆ ಕಣ್ರೀ...ಬಾವಿಯಿಂದ ಒಂದು ಕೊಡ ನೀರು ಸೇದ ಬೇಕಾದರೆ 100 ರೂಪಾಯಿ ಕೊಡಬೇಕಂತೆ. ಚೌಕೀದಾರರು ಕೃಪೆ ಮಾಡಿ ಒಂದು ಕೊಡ ನೀರಿಗೆ 50 ಪರ್ಸೆಂಟ್ ಸಬ್ಸಿಡಿ ಕೊಡುತ್ತಾರೆ. ನಮ್ಮ ಚೌಕೀದಾರರು ಅದೆಷ್ಟು ಒಳ್ಳೆಯವರು ಕಣ್ರೀ... ಜಲ ಯೋಜನೆಯ ಅಡಿಯಲ್ಲಿ ಒಂದು ಕೊಡ ನೀರಿಗೆ 50 ಶೇಕಡ ಸರಕಾರ ಸಬ್ಸ್ಸಿಡಿ ಕೊಡುತ್ತದೆ. ಬರೇ 50 ರೂಪಾಯಿ ಕೊಟ್ಟರೆ ಸಾಕಂತೆ...’’

 ‘‘ನಮ್ಮ ಬಾವಿಯ ನೀರು ಸೇದಲು ನಾವು ಅಂದಾನಿಗೆ ದುಡ್ಡು ಕೊಡಬೇಕೆ....’’ ಕಾಸಿ ಹತಾಶನಾಗಿ ಹಿಂಬದಿಯಲ್ಲಿರುವ ಮನೆಯಬಾವಿಗೆ ಹಾರುವುದಕ್ಕೆಂದು ಧಾವಿಸಿದ. ಬಾವಿ ಪಕ್ಕ ನಿಂತ ಸೂಟ್‌ಧಾರಿಯೊಬ್ಬ ಹೇಳಿದ ‘‘ಸೂಸೈಡ್ ಮಾಡುವ ಮೊದಲು ಟಿಕೆಟ್ ತೆಗೆದುಕೊಳ್ಳಿ. ಸರಕಾರದ ವತಿಯಿಂದ ಸಬ್ಸಿಡಿಯಿದೆ. ಒಂದು ಟಿಕೆಟ್‌ನಲ್ಲಿ ಇಬ್ಬರು ಸೂಸೈಡ್ ಮಾಡಬಹುದು....’’

chelayya@gmail.com

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಚೇಳಯ್ಯ
ಚೇಳಯ್ಯ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X