Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ನಿನ್ನ ಸನಿಹಕೆ: ಪ್ರೇಮದ ಕಾಣಿಕೆ

ನಿನ್ನ ಸನಿಹಕೆ: ಪ್ರೇಮದ ಕಾಣಿಕೆ

ಶಶಿಕರ ಪಾತೂರುಶಶಿಕರ ಪಾತೂರು10 Oct 2021 12:16 AM IST
share
ನಿನ್ನ ಸನಿಹಕೆ: ಪ್ರೇಮದ ಕಾಣಿಕೆ

ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸುವ ದೃಶ್ಯದಲ್ಲಿ ಆಕೆಯ ಪ್ರಥಮ ಸಂಭಾಷಣೆ ''ನಾನು ಡಾ. ರಾಜ್ ಕುಮಾರ್ ರೋಡಲ್ಲಿ ಬರುತ್ತಾ ಇದ್ದೀನಿ'' ಎನ್ನುವುದು. ಅಲ್ಲಿಗೆ ಡಾ. ರಾಜ್ ಕುಮಾರ್ ಮೊಮ್ಮಗಳು ರಾಜರಸ್ತೆಯಲ್ಲಿ ಅಭಿನಯದ ದಾರಿ ತುಳಿದಿದ್ದಾರೆ ಎನ್ನುವುದರ ಸೂಚನೆ ಸಿಗುತ್ತದೆ. ಹೀಗೆ ಆರಂಭವಾಗುವ ಸಂಭಾಷಣೆಗಳಲ್ಲಿನ ಆಕರ್ಷಣೆ ಚಿತ್ರದ ಕೊನೆಯವರೆಗೂ ಇರುತ್ತದೆ. ಆದರೆ ಕತೆಯ ವಿಚಾರದಲ್ಲಿಯೂ ಈ ಮನಸೆಳೆವ ಮಾದರಿ ಇದೆಯಾ ಎಂದರೆ ಇಲ್ಲವೆಂದೇ ಹೇಳಬೇಕಾಗುತ್ತದೆ.

ಚಿತ್ರದ ನಾಯಕ ಆದಿತ್ಯ ಶ್ರೀರಂಗಪಟ್ಟಣದಿಂದ ಬೆಂಗಳೂರು ಸೇರಿಕೊಂಡವನು. ಊರಲ್ಲಿ ತಾಯಿಯೊಬ್ಬಳೇ ಕಷ್ಟ ಪಡುತ್ತಿದ್ದಾಳೆ. ಕುಡಿತದ ದಾಸನಾದ ತಂದೆ ದೂರಾಗಿ ಕುಳಿತಿದ್ದಾನೆ. ಇಂಜಿನಿಯರಿಂಗ್ ವೃತ್ತಿಯಲ್ಲಿರುವ ಆದಿತ್ಯ ಕಚೇರಿಯಲ್ಲಿ ಸಾಲಮಾಡಿ ಮನೆ ಕಟ್ಟಿಸಲು ತಯಾರಾಗಿರುತ್ತಾನೆ. ಅಷ್ಟರಲ್ಲಿ ಆ ಕನಸು ಭಗ್ನವಾಗುತ್ತದೆ. ಅಂತಹ ಸಂದರ್ಭದಲ್ಲಿ ಬೆಂಗಳೂರಿನ ತನ್ನ ಬಾಡಿಗೆ ಮನೆಯಲ್ಲೇ ಜಾಗ ನೀಡುತ್ತಾಳೆ ನಾಯಕಿ ಅಮೃತಾ. ಅಂದಹಾಗೆ ಅಮೃತಾ ಆತನಿಗೆ ತಿಂಗಳ ಹಿಂದೆಯಷ್ಟೇ ಪರಿಚಿತಳಾದ ಸ್ನೇಹಿತೆ. ಈಗ ಸ್ನೇಹವನ್ನೂ ಮೀರಿದ ಆತ್ಮೀಯತೆ. ಮನೆಯವರನ್ನು ಒಪ್ಪಿಸಿ ಅಕ್ಷತೆ ಹಾಕಿಸಿಕೊಳ್ಳುತ್ತೇವೆ ಎನ್ನುವುದು ಅವರಿಬ್ಬರ ದೃಢತೆ. ಆದರೆ ಇದರ ನಡುವೆ ತೊಡಕು ಬರದಿದ್ದರೆ ಮತ್ತೇನಿದೆ ಕತೆ? ಅಂತಹದ್ದೊಂದು ತೊಂದರೆ ಇಬ್ಬರನ್ನೂ ಕಾಡುತ್ತದೆ. ಅದಕ್ಕೆ ಸಂದರ್ಭ ಯಾವ ರೀತಿಯ ಅಂತ್ಯ ನೀಡುತ್ತದೆ ಎನ್ನುವುದನ್ನು ನೀವು ಚಿತ್ರಮಂದಿರದಲ್ಲಿ ನೋಡಬಹುದು.

ನಾಯಕಿಯಾಗಿ ಧನ್ಯಾ ರಾಮ್ ಕುಮಾರ್ ಅವರಿಗೆ ಇದು ಮೊದಲ ಚಿತ್ರ. ಆದರೆ ಅದು ತಿಳಿಯದವರ ಕಣ್ಣಲ್ಲಿ ಆಕೆ ಅನುಭವಿ ನಟಿ. ಅಲ್ಲಿಗೆ ನಿರೀಕ್ಷೆಯ ಪ್ರಥಮ ಹಂತ ಯಶಸ್ವಿಯಾಗಿ ದಾಟಿರುವುದು ಸತ್ಯ. ಧನ್ಯಾ ಕಣ್ಣಿನಲ್ಲಿ ಭಾವವಿದೆ. ಕಂಠದಲ್ಲಿ ಜೀವವಿದೆ. ನಾಯಕನಾಗಿ ಸೂರಜ್ ಗೌಡ ಕೂಡ ನೋಟ, ನಗು, ಧ್ವನಿ ಮತ್ತು ಸಂಭಾಷಣೆಯಲ್ಲೇ ಪಾತ್ರ ನಿಭಾಯಿಸುವ ಪ್ರಯತ್ನ ಮಾಡಿದ್ದಾರೆ. ಕತೆ ಬರೆದು, ನಿರ್ದೇಶಕರಾಗಿ ತಮ್ಮದೂ ಸೇರಿದಂತೆ ಎಲ್ಲರ ಪರಿಮಿತಿಗಳನ್ನು ಅರಿತುಕೊಂಡಿದ್ದಾರೆ! ನಾಯಕನ ತಾಯಿ ಶಾರದವ್ವನಾಗಿ ವೀಣಾ ಬಾಲರಾಜ್, ನಾಯಕಿಯ ತಾಯಿ-ತಂದೆಯಾಗಿ ಚಿತ್ಕಲಾ ಬಿರಾದಾರ ಮತ್ತು ಮಂಜುನಾಥ ಹೆಗ್ಡೆ ಜೋಡಿಯ ನಟನೆ ಕೂಡ ಚಿತ್ರಕ್ಕೆ ಲವಲವಿಕೆ ತುಂಬಲು ಸಹಾಯಕವಾಗಿದೆ. ಛಾಯಾಗ್ರಹಣ ಮತ್ತು ಸಂಗೀತವೂ ಅದಕ್ಕೆ ಪೂರಕವಾಗಿದೆ. ಮನೆ ಮಾಲಕನಾಗಿ ಕರಿಸುಬ್ಬು, ಒಂದೇ ದೃಶ್ಯದಲ್ಲಿ ಬರುವ ಗೌಡನಾಗಿ ಗಣೇಶ್ ರಾವ್ ಕೇಸರ್ಕರ್ ನಟನೆಯೂ ನೆನಪಲ್ಲಿ ಉಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಿರುತೆರೆ ನಟ ರಜನಿಕಾಂತ್ ನಾಯಕನ ಸ್ನೇಹಿತನಾಗಿ ನಗು ಮೂಡಿಸುವಲ್ಲಿ ಗೆದ್ದಿದ್ದಾರೆ. ಹಾಲಿನವನು, ಕೆಲಸದಾಕೆ ಸೇರಿದಂತೆ ಪ್ರತಿಯೊಂದು ಪಾತ್ರಕ್ಕೂ ಅವರದೇ ಆದ ವರ್ತನೆ, ಸಂಭಾಷಣೆ ನೀಡುವ ಮೂಲಕ ಗಮನ ಸೆಳೆಯುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.

 ಇನ್ನು ನಿರ್ದೇಶಕರು ಸೋತ ವಿಚಾರಗಳತ್ತ ಗಮನಿಸಿದಾಗ ಚಿತ್ರಕತೆಯ ಬಗ್ಗೆ ಹೇಳಲೇಬೇಕು. ಚಿತ್ರ ನೋಡಿದಾಗ ಕತೆ ಸರಳವಾಗಿ ಶುರುವಾಗುತ್ತದೆ ಒಪ್ಪೋಣ. ಆದರೆ ಅಂತ್ಯ ಕೂಡ ಇಷ್ಟು ಸರಳವಾಗಿರುತ್ತದೆಯೇ? ಎನ್ನುವ ಸಂದೇಹ ಮೂಡುವುದು ಸಹಜ. ಅದೇ ಮೈನಸ್ ಎಂದು ಕೂಡ ಹೇಳಬಹುದು. ಹೊಡೆದಾಟದ ದೃಶ್ಯಗಳು ಅದ್ಭುತ ಹಿನ್ನೆಲೆ ಸಂಗೀತದಿಂದ ಆಕರ್ಷಣೆ ಪಡೆದಿದೆ. ಆದರೆ ನಾಯಕನಿಗೆ ನೀಡಿರುವ ಬಿಲ್ಡಪ್ ಅನಗತ್ಯವೆನ್ನುವಂತಿದೆ. ಅದರಲ್ಲಿಯೂ ತಾಯಿ ಮಾಸ್ ಡೈಲಾಗ್‌ನಿಂದ ಕರೆದಾಕ್ಷಣ ಮಗ ಪ್ರತ್ಯಕ್ಷವಾಗಿ ಹೊಡೆದಾಡುವ ಟಿಪಿಕಲ್ ಕಮರ್ಷಿಯಲ್ ದೃಶ್ಯಗಳನ್ನು ಕಂಡಾಗ ಆವೇಶಕ್ಕಿಂತ ನಗು ಬರುವುದೇ ಹೆಚ್ಚು. ನಾಯಕಿಗೆ ತೊಂದರೆ ನೀಡುವ ಖಳ ಪಾತ್ರಗಳಿಂದ ಮಾತ್ರ ಉರ್ದು ಮಾತನಾಡಿಸುವ ದರ್ದು ಏನಿತ್ತು ಎನ್ನುವುದು ಕೂಡ ಚಿಂತಿಸಬೇಕಾದ ವಿಚಾರ. ಅದರಲ್ಲಿಯೂ ಎಲ್ಲ ಧರ್ಮೀಯರನ್ನು ಆತ್ಮೀಯವಾಗಿ ಕಂಡಿರುವ ರಾಜ್ ಕುಮಾರ್ ಕುಟುಂಬದ ಪ್ರಥಮ ನಾಯಕಿಯ ಚಿತ್ರ ಎನ್ನುವಾಗ ಈ ಅಂಶವೂ ಪರಿಗಣಿಸಲ್ಪಡುತ್ತದೆ.

ಲವಲವಿಕೆ ತುಂಬಿದ ಪ್ರೇಮಚಿತ್ರ ಎಂದಷ್ಟೇ ಗಮನಿಸಿದಾಗ ತೆಲುಗಿನಲ್ಲಿ ತಮನ್ನಾ ನಟನೆಯ 'ಹಂಡ್ರೆಡ್ ಪರ್ಸೆಂಟ್ ಲವ್' ಸೇರಿದಂತೆ ಈ ಮಾದರಿಯ ಸಾಕಷ್ಟು ಚಿತ್ರಗಳು ದಶಕದ ಹಿಂದೆಯೇ ಬಂದಿವೆ. ಆದರೆ ಕನ್ನಡದ ಮಟ್ಟಿಗೆ ಇದು ಇಬ್ಬರು ಯುವ ಪ್ರತಿಭೆಗಳ ಪ್ರೇಮದ ಕಾಣಿಕೆ. ಹಾಗೆ ತಿಳಿದುಕೊಂಡು ಚಿತ್ರವನ್ನು ನೋಡಿದಾಗ ಆನಂದಿಸುವಲ್ಲಿ ಯಾವ ತೊಂದರೆಗಳೂ ಇರಲಾರವು.

ನಿರ್ದೇಶನ: ಸೂರಜ್ ಗೌಡ
ನಿರ್ಮಾಣ: ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್
ತಾರಾಗಣ: ಸೂರಜ್ ಗೌಡ, ಧನ್ಯಾ ರಾಮ್ ಕುಮಾರ್

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X