ಬೆಲೆ ಏರಿಕೆ, 'ರೈತರ ಹತ್ಯೆ' ಬಗ್ಗೆ ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ: "ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಗಳು" ಮತ್ತು ಬೆಲೆ ಏರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಪ್ರಶ್ನಿಸಿದರು. ಆದರೆ, ಅವರನ್ನು ಟೀಕಿಸಿದಾಗ ಅಥವಾ ಅವರ "ಸ್ನೇಹಿತರು" ಅವರನ್ನು ಪ್ರಶ್ನಿಸಿದಾಗ ವೈಲಂಟ್ ಆಗುತ್ತಾರೆ ಎಂದರು.
ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವನೆ ಅವರ "ಚೀನಾ ಇಲ್ಲಿ ಉಳಿಯಲಿದೆ’’ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಸರಕಾರವನ್ನು ಗುರಿಯಾಗಿಸಿಕೊಂಡರು.
" ಚೀನಾ ಇಲ್ಲಿ ನೆಲೆಯಾಗಲು ಇದೆ. ಅದು ಎಲ್ಲಿ ಉಳಿಯಲಿದೆ? ನಮ್ಮ ಭೂಪ್ರದೇಶದಲ್ಲಿ ಅದು ಉಳಿಯುತ್ತದೆಯೇ? ಎಂದು ಗಾಂಧಿ ಟ್ವಿಟರ್‌ನಲ್ಲಿ ಪ್ರಶ್ನಿಸಿದರು. ಪಿಎಲ್‌ಎ ನಿರ್ಮಾಣದ ಕುರಿತು ಜನರಲ್ ನರವನೆಯವರ ಹೇಳಿಕೆಯ ಕುರಿತ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಮತ್ತೊಂದು ಟ್ವೀಟ್ ನಲ್ಲಿ ಇಂಧನ ಬೆಲೆ ಏರಿಕೆ ಹಾಗೂ ಲಖಿಂಪುರ ಖೇರಿಯಲ್ಲಿ ರೈತರ "ಹತ್ಯೆಗಳ" ಬಗ್ಗೆ ಪ್ರಧಾನಿ ಮೌನವಾಗಿರುವುದರ ವಿರುದ್ಧ ವಾಗ್ದಾಳಿ ನಡೆಸಿದರು.
ಹಣದುಬ್ಬರ, ತೈಲ ಬೆಲೆ, ನಿರುದ್ಯೋಗ, ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಪ್ರಧಾನಿ ಸೈಲಂಟ್ ಆಗುತ್ತಾರೆ. ಕ್ಯಾಮರಾ ಹಾಗೂ ಫೋಟೊ ಆಪ್ ಗಳ ಕೊರತೆ, ನಿಜವಾದ ಟೀಕೆ, ಸ್ನೇಹಿತರ ಪ್ರಶ್ನೆಗಳಿಗೆ ವೈಲಂಟ್ ಆಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.
PM silent-
— Rahul Gandhi (@RahulGandhi) October 10, 2021
बढ़ती महंगाई-तेल के दाम
बेरोज़गारी
किसान व भाजपा कार्यकर्ता की हत्या
PM violent-
कैमरा व फ़ोटो ऑप में कमी
सच्ची आलोचना
मित्रों पर सवाल।